ಸೃಜನ ಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕೆಲಸದ ಮೇಲಿನ ನಿಯತ್ತು ಮುಖ್ಯ: ಡಾ.ಬಿ.ಎ.ವಿವೇಕ ರೈ

Update: 2018-10-16 14:53 GMT

ಮಂಗಳೂರು, ಅ.16: ಕಥೆ, ಕವನರಚನೆ ಮೊದಲಾದ ಸೃಜನ ಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸ್ಮಾರ್ಟ್ ಆಗಬೇಕಾಗಿಲ್ಲ ತಮ್ಮ ಕೆಲಸದ ಮೇಲಿನ ನಿಯತ್ತು ಮುಖ್ಯವಾಗುತ್ತದೆ ಎಂದು ಹಂಪಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.

ಅವರು ಕೆನರಾ ಕಾಲೇಜಿನ ಸಭಾಂಗಣದಲ್ಲಿ ಅರೆಹೊಳೆ ಪ್ರತಿಷ್ಠಾನ ಮತ್ತು ವಿದ್ಯಾ ಪ್ರಕಾಶನದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸಕ, ಸಾಹಿತಿ ರಘು ಇಡ್ಕಿದು ಅವರ ತುಳು ಕನ್ನಡದ 5 ನಾಟಕ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ನಾವು ಎಲ್ಲಿರುತ್ತೇವೆ ಎನ್ನುವುದು ಮುಖ್ಯವಲ್ಲ. ಏನು ಮಾಡುತ್ತಿದ್ದೇವೆ ಎನ್ನುವುದು ಮುಖ್ಯ. ಮಂಗಳೂರು ಸ್ಮಾರ್ಟ್ ಸಿಟಿ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಾವು ಹೆಚ್ಚು ಸ್ಮಾರ್ಟ್ ಆಗದಿರುವುದು ಒಳ್ಳೆಯದು. ಎಲ್ಲರೂ ಒಂದೇ ರೀತಿ ಆದರೆ ವ್ಯತ್ಯಾಸಗಳೆ ಇರುವುದಿಲ್ಲ. ಯಾವೂದೇ ವ್ಯವಹಾರಿಕ ದೃಷ್ಟಿಯಿಲ್ಲದೆ. ನಮ್ಮ ಕೆಲಸ ನಿಯತ್ತಿನಿಂದ ಮಾಡುತ್ತಾ ನಾವು ದೊಡ್ಡವರಾಗಬೇಕು ಎಂದು ವಿವೇಕ ರೈ ತಿಳಿಸಿದರು.

ಕಾರ್ಯಕ್ರಮದಲ್ಲಿ ಅವರು ರಘು ಇಡ್ಕಿದು ಅವರ ಒಂದು ಪ್ರೀತಿಯ ಕಥೆ, ಕಿನ್ಯಗ, ಮೋಕೆದ ತಂಗಡಿ, ಜೈಲ್ ಮತ್ತು ನವ್ಯಕವಿ ಪೇಜಾವರ ಸದಾಶಿವರಾಯ ಬೀದಿಗಿಳಿದ ನಾರಿ ನಾಟಕದ ರೂಪಾಂತರ ಇಲ್‌ಲ್ ಜತ್ತಿ ಪೊಣ್ಣು ನಾಟಕಗಳು ಬಿಡುಗಡೆ ಗೊಂಡವು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಗೋವಿಂದ ದಾಸ ಕಾಲೇಜಿನ ಉಪ ಪ್ರಾಂಶುಪಾಲ ಪೊ.ಪಿ.ಕೃಷ್ಣ ಮೂರ್ತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ,ಲೇಖಕ ರಘು ಇಡ್ಕದು, ಉಪಸ್ಥಿತರಿದ್ದರು.

ಸಾಹಿತಿ ಎನ್ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವರಾವ್ ಸ್ವಾಗತಿಸಿ, ವಿದ್ಯಾ ಯು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News