ಮಹಿಳೆಗೆ ಬೈಕ್ ಢಿಕ್ಕಿ; ಗಾಯ

Update: 2018-10-16 15:51 GMT

ಮಂಗಳೂರು, ಅ.16: ರಸ್ತೆಬದಿ ನಿಂತಿದ್ದ ಮಹಿಳೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ವೆಲೆನ್ಸಿಯಾ ನಿವಾಸಿ ರೀಟಾ ಅಲ್ಫೋನ್ಸಾ ಗಾಯಗೊಂಡವರು.

ರೀಟಾ ಅಲ್ಫೋನ್ಸಾ ವೆಲೆನ್ಸಿಯಾದ 3ನೇ ಅಡ್ಡ ರಸ್ತೆ ದತ್ತಸ್ಟೋರ್ ಬಳಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದರು. ಬೆಳಗ್ಗೆ ಸೂಟರ್‌ಪೇಟೆಯಿಂದ ಬೈಕ್ ಚಲಾಯಿಸಿಕೊಂಡು ಬಂದ ಐಸಾಕ್ ನಿಯಂತ್ರಣ ತಪ್ಪಿ ರೀಟಾ ಅವರಿಗೆ ಢಿಕ್ಕಿ ಹೊಡೆಸಿದ್ದಾರೆ.

ಪರಿಣಾಮ ರೀಟಾ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಕುರಿತು ಮಂಗಳೂರು ನಗರದ ಸಂಚಾರ ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News