ಖೋಖೋ ಪಂದ್ಯಾಟ: ಗುಲ್ಬರ್ಗ, ತುಮಕೂರು ತಂಡ ಫ್ರಿಕ್ವಾರ್ಟರ್ ಫೈನಲ್‌ಗೆ

Update: 2018-10-16 16:07 GMT

ಉಡುಪಿ, ಅ.15: ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ದಲ್ಲಿ ಹಮ್ಮಿಕೊಳ್ಳಲಾಗಿರುವ ನಾಲ್ಕು ದಿನಗಳ ಮಹಿಳೆಯರ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಖೋಖೋ ಪಂದ್ಯಾಟದಲ್ಲಿ ಕರ್ನಾಟಕದ ಗುಲ್ಬರ್ಗ ಹಾಗೂ ತುಮಕೂರು ವಿವಿ ತಂಡ ಫ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

ಬಿ ಗುಂಪಿನಲ್ಲಿರುವ ಗುಲ್ಬರ್ಗ ತಂಡವು ಮೂರನೆ ಸುತ್ತಿನಲ್ಲಿ ಆಂಧ್ರ ಯೋಗಿ ಮಹಿಳಾ ವಿವಿ ತಂಡದಿಂದ ವಾಕ್‌ಒವರ್ ಪಡೆದರೆ, ಡಿ ಗುಂಪಿನಲ್ಲಿ ತುಮಕೂರು ವಿವಿಯು ತಮಿಳುನಾಡು ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿವಿ ಯನ್ನು 9-3 ಅಂಕಗಳೊಂದಿಗೆ ಮಣಿಸಿ ಫಿ್ರಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು.

ಎ ಗುಂಪಿನಲ್ಲಿ ಸೇಲಂ ಪೆರಿಯಾರ್ ವಿವಿಯು ಗುಂಟೂರು ಆಚಾರ್ಯ ನಾಗಾರ್ಜುನ ವಿವಿಯ ವಿರುದ್ಧ 9-5, ಕಣ್ಣೂರು ವಿವಿಯು ತಮಿಳುನಾಡು ಮನೋನ್ ಮನಿಯಮ್ ಸುಂದರ್‌ನಾರ್ ವಿವಿಯ ವಿರುದ್ಧ 10-05 ಅಂಕಗಳ ಅಂತರದಲ್ಲಿ ಜಯಗಳಿಸಿತು.

ಸಿ ಗುಂಪಿನಲ್ಲಿ ಆಂಧ್ರ ಮಚಲಿಪಟ್ಟಣಂನ ಕೃಷ್ಣ ವಿವಿಯು ತಮಿಳುನಾಡು ಮದ್ರಾಸು ವಿವಿಯನ್ನು 6-5ರಿಂದ ಹಾಗೂ ವಿಶಾಖಪಟ್ಟಣಮ್ ಆಂಧ್ರ ವಿವಿಯು ಹೈದರಾಬಾದ್‌ನ ಉಸ್ಮಾನಿಯ ವಿವಿಯನ್ನು 5-4 ಅಂಕದೊಂದಿಗೆ ಸೋಲಿಸಿದೆ. ಡಿ ಗುಂಪಿನಲ್ಲಿ ತಮಿಳುನಾಡು ಮದುರೈ ಕಾಮರಾಜ್ ವಿವಿಯು ಬೆಳಗಾವಿ ರಾಣಿಚೆನ್ನಮ್ಮ ವಿವಿಯನ್ನು 16-4 ಹಾಗೂ ಬಿ ಗುಂಪಿನಲ್ಲಿ ಪಾಂಡಿಚೇರಿ ವಿವಿಯು ತಮಿಳುನಾಡು ಅವಿನಾಶಿ ಲಿಂಗಮ್ ಇನ್ಟಿಟ್ಯೂಟ್ ಫಾರ್ ಹೋಮ್ ಸೈನ್ಸಸ್ ವಿವಿಯನ್ನು 11-07 ಅಂತರದಲ್ಲಿ ಮಣಿಸಿ ಫ್ರಿಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿವೆ.

ಭಾರೀ ಮಳೆ: ಖೋಖೋ ಪಂದ್ಯಾಟ ಸ್ಥಳಾಂತರ

ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಮಹಿಳೆಯರ ಖೋಖೋ ಪಂದ್ಯಾಟವನ್ನು ಅಜ್ಜರಕಾಡುವಿನಲ್ಲಿ ನಿರ್ಮಾಣ ಹಂತದಲ್ಲಿರುವ ಲಾನ್ ಟೆನಿಸ್ ಒಳಾಂಗಣ ಕ್ರೀಡಾಂಗಣಕ್ಕೆ ಇಂದು ಸಂಜೆ ಸ್ಥಳಾಂತರಿಸಲಾಯಿತು.

ಒಳಾಂಗಣ ಕ್ರೀಡಾಂಗಣದಲ್ಲಿ ಒಂದು ಅಂಕಣವನ್ನು ನಿರ್ಮಿಸಿ ನಾಲ್ಕು ಫ್ರಿ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಿಸಲಾಗುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಸಂಜೆ ವೇಳೆ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹೊನಲು ಬೆಳಕಿನಲ್ಲಿ ಪಂದ್ಯ ಗಳು ತಡರಾತ್ರಿವರೆಗೂ ಮುಂದುವರೆಯಲಿದೆ ಎಂದು ಪಂದ್ಯಾಟದ ಸಂಚಾ ಲಕ ಡಾ.ರೋಶನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News