ಪತ್ರಕರ್ತೆಯ ಕೊಳೆತ ಮೃತದೇಹ ಪತ್ತೆ

Update: 2018-10-16 16:23 GMT

ನೋಯ್ಡಾ, ಅ. 16: ನೋಯ್ಡಾ ಸೆಕ್ಟರ್ 99ನಲ್ಲಿರುವ ಸುಪ್ರೀಂ ಟವರ್‌ನ ಫ್ಲಾಟ್‌ನಲ್ಲಿ ರವಿವಾರ ಬೆಳಗ್ಗೆ 52 ವರ್ಷ ಪ್ರಾಯದ ಪತ್ರಕರ್ತೆ ಬಬಿತಾ ಬಸು ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಬಿತಾ ಅವರು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು, ಒಂದು ವಾರಗಳ ಹಿಂದೆ ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ (ಡಿಜಿಟಲ್)ದಲ್ಲಿ ಕೆಲಸ ಮಾಡುತ್ತಿದ್ದ ಬಸು ಅವರು ಕಳೆದ 20 ತಿಂಗಳಿಂದ ಫ್ಲಾಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರ ಪುತ್ರ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿಡ್ನಿ ದಾನಿಗಳ ಬಗ್ಗೆ ಪರಿಶೀಲಿಸಲು ಬಸು ಅವರು ಕಳೆದ ವರ್ಷ ಚೆನ್ನೈಗೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News