ಒಳಉಡುಪು ಧರಿಸಿ ಎಂ.ಜೆ. ಅಕ್ಬರ್ ಬಾಗಿಲು ತೆರೆದರು: ಕೇಂದ್ರ ಸಚಿವರ ವಿರುದ್ಧ ಮತ್ತೊಬ್ಬ ಮಹಿಳೆಯ ಆರೋಪ

Update: 2018-10-16 16:52 GMT

ಹೊಸದಿಲ್ಲಿ, ಅ.16: ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಮತ್ತೊಬ್ಬ ಮಹಿಳೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. “15 ವರ್ಷಗಳ ಹಿಂದೆ ಅಕ್ಬರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ” ಎಂದು  Scroll.inನಲ್ಲಿ ಪ್ರಕಟವಾದ ಲೇಖನದಲ್ಲಿ ಆರೋಪಿಸಿದ್ದಾರೆ.

1992ರಲ್ಲಿ ತಾನು ಕೊಲ್ಕತ್ತಾದಲ್ಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿದ್ದಾಗ ಮೊದಲ ಘಟನೆ ನಡೆದಿತ್ತು ಎಂದವರು ಹೇಳಿದ್ದಾರೆ. ಸಹೋದ್ಯೋಗಿಗಳೊಂದಿಗೆ ತಾನು ಅಕ್ಬರ್ ರನ್ನು ಹೊಟೇಲೊಂದರಲ್ಲಿ ಭೇಟಿಯಾಗಿದ್ದೆ. ತನ್ನ ಮೊಬೈಲ್ ನಂಬರ್ ಪಡೆದ ಅವರು ಕರೆ ಮಾಡುತ್ತಿದ್ದರು. ಹೊಟೇಲ್ ನಲ್ಲಿ ಭೇಟಿಯಾಗಲು ನಿರಂತರವಾಗಿ ಹೇಳುತ್ತಿದ್ದರು ಎಂದವರು ಆರೋಪಿಸಿದ್ದಾರೆ.

“ಒಂದು ದಿನ ನಾನು ಹೊಟೇಲ್ ಗೆ ಹೋಗಿದ್ದಾಗ ಒಳಉಡುಪು ಧರಿಸಿ ನೀವು ಬಾಗಿಲು ತೆರೆದಿದ್ದೀರಿ. ನಾನು ಆಘಾತದಿಂದ ಬಾಗಿಲ ಬಳಿ ನಿಂತೆ” ಎಂದವರು ಲೇಖನದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News