ನಂದಿತಾ ದಾಸ್ ತಂದೆ ಜತಿನ್ ದಾಸ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

Update: 2018-10-16 16:59 GMT

ಮುಂಬೈ, ಅ. 16: ನಟಿ, ನಿರ್ದೇಶಕಿ ನಂದಿತಾ ದಾಸ್ ಅವರ ತಂದೆ ಹಾಗೂ ಖ್ಯಾತ ಕಲಾವಿದ ಜತಿನ್ ದಾಸ್ 14 ವರ್ಷಗಳ ಹಿಂದೆ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಜತಿನ್ ದಾಸ್ ಅವರ ಪೇಪರ್ ಮೇಕಿಂಗ್ ಕಂಪೆನಿಯ ಸಹ ಸ್ಥಾಪಕಿ ನಿಶಾ ಬೋರಾ ಆರೋಪಿಸಿದ್ದಾರೆ.

ಆದರೆ, ಈ ಆರೋಪವನ್ನು ಜತಿನ್ ದಾಸ್ ನಿರಾಕರಿಸಿದ್ದಾರೆ. ದೇಶಾದ್ಯಂತ ಬಿರುಗಾಳಿ ಎಬ್ಬಿಸುತ್ತಿರುವ ಮೀಟೂ ಚಳವಳಿಯ ಬೆಳೆಯುತ್ತಿರುವ ಪಟ್ಟಿಯಲ್ಲಿ ಇತ್ತೀಚೆಗಿನ ಸೇರ್ಪಡೆ ಜತಿನ್ ದಾಸ್. “ಆಗ ನನಗೆ 28 ವರ್ಷ. ಭೋಜನದ ಸಂದರ್ಭ ದಾಸ್ ಅವರು, ‘‘ನಿಮಗೆ ಸಮಯವಿದೆಯೇ ? ತನ್ನ ಕೆಲಸಕ್ಕೆ ಬೇಕಾದ ಸಲಕರಣೆಗಳನ್ನು ಸಂಯೋಜಿಸಲು ಕೆಲವು ದಿನಗಳ ಕಾಲ ನೆರವು ನೀಡಬಹುದೇ’ ಎಂದು ಪ್ರಶ್ನಿಸಿದ್ದರು. ನಾನು ಎರಡನೇ ದಿನ ಒಪ್ಪಿಗೆ ನೀಡಿದೆ. ಅವರು ವಿಲ್ಲೇಜ್ ಸ್ಟುಡಿಯೊದಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದರು” ಎಂದು ನಿಶಾ ಬೋರಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News