2018ರ ರಚನಾ ಪ್ರಶಸ್ತಿಗೆ ‘ಮಿರರ್ ನೌ’ ಕಾರ್ಯನಿರ್ವಾಹಕ ಸಂಪಾದಕಿ ಫೇ ಡಿಸೋಜ ಆಯ್ಕೆ

Update: 2018-10-16 17:14 GMT

ಮಂಗಳೂರು, ಅ.16: ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧೀನದ ರಚನಾ ಸಂಸ್ಥೆ ನೀಡುವ 2018ನೆ ಸಾಲಿನ ರಚನಾ ಪ್ರಶಸ್ತಿಗೆ ‘ಮಿರರ್ ನೌ’ ಚಾನೆಲ್ ನ ಕಾರ್ಯನಿರ್ವಾಹಕ ಸಂಪಾದಕಿ ಫೇ ಡಿಸೋಜ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಜನಿಸಿದ ಫೇ ಡಿಸೋಜ ಇಲ್ಲಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ವಿದ್ಯಾರ್ಥಿಯಾಗಿದ್ದಾಗಲೇ ಆಲ್ ಇಂಡಿಯಾ ರೇಡಿಯೋ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಅವರು, 2003ರಲ್ಲಿ ಸಿಎನ್ ಬಿಸಿ ಟಿವಿ 18ನಲ್ಲಿ ಉದ್ಯೋಗದಲ್ಲಿದ್ದರು. ನಂತರ ‘ಇಟಿ ನೌ’ನಲ್ಲಿ ‘ಇನ್ವೆಸ್ಟರ್ಸ್ ಗೈಡ್’ ಎಂಬ ಕಾರ್ಯಕ್ರಮವನ್ನು ನಡೆಸಿದರು.

2017ರಲ್ಲಿ ‘ದ ಟೈಮ್ಸ್ ನೆಟ್ ವರ್ಕ್’ ‘ಮಿರರ್ ನೌ’ ಎಂಬ ಚಾನೆಲನ್ನು ಆರಂಭಿಸಿದ್ದು, ಫೇ ಡಿಸೋಜ ಹಿರಿಯ ಸಂಪಾದಕಿಯಾದರು. ‘ಮಿರರ್ ನೌ’ನಲ್ಲಿ ಅವರು ನಡೆಸುವ ‘ದ ಅರ್ಬನ್ ಡಿಬೇಟ್’ ಪ್ರಸಿದ್ಧಿ ಗಳಿಸಿದೆ. ಭ್ರಷ್ಟಾಚಾರ, ಕೋಮುವಾದ, ಮಹಿಳೆಯರ ಹಕ್ಕುಗಳು, ಸರಕಾರದ ವೈಫಲ್ಯ ಮುಂತಾದ ವಿಷಯಗಳ ಬಗ್ಗೆ ಅವರು ಕಾರ್ಯಕ್ರಮದಲ್ಲಿ ಚರ್ಚಿಸುತ್ತಾರೆ.

ಈ ಬಾರಿಯ ರಚನಾ ಪ್ರಶಸ್ತಿಗೆ ಫೇ ಡಿಸೋಜರೊಂದಿಗೆ ಲಾರೆನ್ಸ್ ಪಿಂಟೊ, ರೊನಾಲ್ಡ್ ಕ್ಯಾಸ್ತಲಿನೊ, ಅಲೋಶಿಯಸ್ ರಿಚರ್ಡ್ ಲೋಬೊ ಹಾಗು ಮರಿಯಾ ಜ್ಯೋತಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News