ಮಾನವಹಕ್ಕು ಕಾರ್ಯಕರ್ತನ ವಿರುದ್ಧ ದೇಶದ್ರೋಹ ಮೊಕದ್ದಮೆ: ಬಾಂಗ್ಲಾ ಸೇನಾ ಮುಖ್ಯಸ್ಥನ ಆರೋಪzuf

Update: 2018-10-16 17:59 GMT

ಢಾಕಾ (ಬಾಂಗ್ಲಾದೇಶ), ಅ. 16: ಬಾಂಗ್ಲಾದೇಶದ ಸೇನಾ ಮುಖ್ಯಸ್ಥರನ್ನು ಟೀಕಿಸಿದ ಮಾನವಹಕ್ಕುಗಳ ಕಾರ್ಯಕರ್ತರೊಬ್ಬರ ವಿರುದ್ಧ ದೇಶದ್ರೋಹ ಮೊಕದ್ದಮೆಯನ್ನು ದಾಖಲಿಸಲಾಗಿದೆ.

ಅಕ್ಟೋಬರ್ 9ರಂದು ಪ್ರಸಾರವಾದ ಟೆಲಿವಿಶನ್ ಕಾರ್ಯಕ್ರಮವೊಂದರಲ್ಲಿ ಬಾಂಗ್ಲಾದೇಶ ಸೇನಾ ಮುಖ್ಯಸ್ಥರ ವಿರುದ್ಧ ಝಫರುಲ್ಲಾ ಚೌಧರಿ ‘ದುರುದ್ದೇಶಪೂರಿತ ಸುಳ್ಳು ಹೇಳಿಕೆ’ಗಳನ್ನು ನೀಡಿದ್ದಾರೆ ಎಂಬುದಾಗಿ ಸೇನೆ ಆರೋಪಿಸಿದೆ ಎಂದು ‘ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ.

‘‘ಝಫರುಲ್ಲಾ ಚೌಧರಿ ವಿರುದ್ಧ ದೇಶದ್ರೋಹ ಆರೋಪ ದಾಖಲಾಗಿದೆ. ಪ್ರಕರಣದ ವಿಚಾರಣೆಯ ಹೊಣೆಯನ್ನು ಪೊಲೀಸ್ ಪತ್ತೇದಾರಿ ವಿಭಾಗಕ್ಕೆ ವಹಿಸಲಾಗಿದೆ’’ ಎಂದು ಢಾಕಾ ಮೆಟ್ರೊಪೊಲಿಟನ್ ಪೊಲೀಸ್‌ನ ಹೆಚ್ಚುವರಿ ಕಮಿಶನರ್ ತಿಳಿಸಿದರು.

ಚತ್ತಗ್ರಾಮ್‌ನಲ್ಲಿರುವ ತನ್ನ ಕಮಾಂಡ್‌ನಲ್ಲಿರುವ ಪ್ರದೇಶದಿಂದ ಭಾರೀ ಪ್ರಮಾಣದ ಸೇನಾ ಶಸ್ತ್ರಾಸ್ತ್ರಗಳು ಕಳೆದುಹೋಗಿರುವ ಅಥವಾ ಕಳವಾಗಿರುವ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಅಝೀಝ್ ಅಹ್ಮದ್ ಸೇನಾ ವಿಚಾರಣೆ (ಕೋರ್ಟ್ ಮಾರ್ಶಲ್)ಯನ್ನು ಎದುರಿಸುತ್ತಿದ್ದಾರೆ ಎಂಬುದಾಗಿ ಚೌಧರಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News