ಸ್ಟೇಜು, ಪೇಜುಗಳಿಂದ ಸಮಾಜಕ್ಕೆ ಸೂಕ್ತ ಮಾರ್ಗ ದರ್ಶನ ದೊರಕಲಿ: ಯಸ್.ಬಿ.ದಾರಿಮಿ

Update: 2018-10-17 17:20 GMT

ಮುಲ್ಕಿ, ಅ.17: ಸ್ಟೇಜು ಮತ್ತು ಪೇಜುಗಳು ಸಮಾಜವನ್ನು ತಿದ್ದುವ ತಾಣಗಳಾಗಿದ್ದು ಇವೆರಡಕ್ಕೂ ಅದರದ್ದೇ ಆದ ವಿಶೇಷತೆ ಇವೆ. ಇವೆರಡನ್ನೂ ಪರಿಣಾಮಕಾರಿಯಾಗಿ ಸದ್ಭಳಕೆ ಮಾಡಿ ಜನರಿಗೆ ಬೇಕಾದ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಉಲಮಾ ಉಮರಾ ನಾಯಕರಿಂದ ಉಂಟಾದರೆ ಸಮಾಜದ ಇಹ ಪರ ಮೋಕ್ಷಕ್ಕೆ ಅದು ಕಾರಣವಾಗುತ್ತದೆ ಎಂದು ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ಖತೀಬ್ ಯಸ್ ಬಿ ದಾರಿಮಿ ಹೇಳಿದ್ದಾರೆ.

ಅವರು ಕಾರ್ನಾಡ್ ನೂರಿಯ್ಯಾ ಮಸೀದಿ ವಠಾರದಲ್ಲಿ ಈ ಹಿಂದೆ ನಿರ್ಮಿಸಲಾಗಿದ್ದ ಇದೀಗ ನವೀಕೃತಗೊಂಡ ಮರ್ಹೂಂ ಕೋಟ ಉಸ್ತಾದ್ ವೇದಿಕೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇದೇ ವೇಳೆ ಕಾರ್ನಾಡ್ ಮಸೀದಿಗೆ ನೂತನವಾಗಿ ಅಳವಡಿಸುವ ಜನರೇಟರ್ ಗೆ ಧನ ಸಹಾಯದ ಕೊಡುಗೆಯಿತ್ತ ಹಿದಾಯತುಲ್ ಇಸ್ಲಾಂ ದಪ್ ಕಮಿಟಿ, ನುಸ್ರತುಲ್ ಮಸಾಕೀನ್ ಸಮಿತಿ ಹಾಗೂ ಕಾರ್ನಾಡ್  ಯೆಂಗ್ ಮೆನ್ಸ್ ನ ಕಾರ್ಯ ವೈಖರಿಯನ್ನು ಶ್ಲಾಘಿಸುತ್ತಾ ಹಿರಿಯರೊಂದಿಗೆ ಸಮಾಲೋಚನೆ ನಡೆಸಿ ಇನ್ನೂ ಉತ್ತಮ ಕಾರ್ಯಯೋಜನೆಗಳನ್ನು ಅಳವಡಿಸಿ ನಮ್ಮ ಜಮಾಹತ್ತನ್ನು ಮಾದರಿಯಾಗಿ ರೂಪಿಸಲು ಪಣತೊಡಬೇಕಾಗಿದೆ ಎಂದರು ಕಾರ್ನಾಡ್ ಮಸೀದಿಯ ಖತೀಬ್ ಹಾಜಿ ಇಸ್ಮಾಯಿಲ್ ದಾರಿಮಿ ನಾಳ ಹೇಳಿದರು.

 ಜಮಾಅತ್ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲಿಯಾಕತ್ ,ಕೋಶಾಧಿಕಾರಿ ಫಾರೂಕ್ ಹಾಜಿ, ಜಮಾಅತ್ ಸಮಿತಿ ಸದಸ್ಯರಾದ ಎಂ ಕೆ ಹಸೈನ್ ಪುತ್ತುಬಾವು, ಅಕ್ಬರ್, ಉಮರ್ ಹಾಜಿ, ಮದೀನ ಕಾದರ್ , ಅಮಾನುಲ್ಲಾ, ಯವ ಸಂಸ್ಥೆಗಳ ಮುಖಂಡರಾದ  ಹಕೀಮ್ ಕಾರ್ನಾಡ್  ರಿಝ್ವಾನ್ ಕಾರ್ನಾಡ್, ಇಕ್ಬಾಲ್ ಅಬುಸಾಲಿ, ಹುಸೈನ್ ಕೇರಿ, ಹಮೀದ್ ಕಿಲ್ಪಾಡಿ ಹಾಗೂ ಮುಲ್ಕಿ ಕಾರ್ನಾಡ್ ಮದ್ರಸ ಅಧ್ಯಾಪಕರು ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News