‘ಮೀ ಟೂ’ಅಭಿಯಾನ: ಲೈಂಗಿಕ ಕಿರುಕುಳ ಕಾನೂನಿನ ಲೋಪ ಪರಿಶೀಲನೆಗೆ ಸಚಿವ ಸಮಿತಿ

Update: 2018-10-17 17:34 GMT

ಹೊಸದಿಲ್ಲಿ, ಅ.17: ‘ಮೀ ಟೂ ’ಅಭಿಯಾನವು ಭಾರತದಲ್ಲಿ ಕಾವೇರುತ್ತಿರುವ ನಡುವೆಯೇ ಲೈಂಗಿಕ ಕಿರುಕುಳ ಕುರಿತು ಕಾನೂನಿನಲ್ಲಿರುವ ಲೋಪಗಳನ್ನು ಪರಿಶೀಲಿಸಲು ಸಚಿವರ ಸಮಿತಿಯೊಂದನ್ನು ರಚಿಸಲು ಸರಕಾರವು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಲೈಂಗಿಕ ಕಿರುಕುಳಗಳ ದೂರುಗಳನ್ನು ನಿರ್ವಹಿಸಲು ಶಾಸನಾತ್ಮಕ ಮತ್ತು ಸಾಂಸ್ಥಿಕ ವ್ಯವಸ್ಥೆಯೊಂದನ್ನು ತರುವುದನ್ನು ಪರಿಶೀಲಿಸಲು ಮತ್ತು ಅದನ್ನು ಹೇಗೆ ಬಲಪಡಿಸಬಹುದು ಎಂಬ ಬಗ್ಗೆ ತನ್ನ ಸಚಿವಾಲಯಕ್ಕೆ ಸಲಹೆ ನೀಡಲು ಕಾನೂನು ಸಮಿತಿಯೊಂದರ ರಚನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಇತ್ತೀಚಿಗೆ ಪ್ರಸ್ತಾಪಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News