ಗಾಝಾ ಜೊತೆಗಿನ 2 ಗಡಿದಾಟು ಮುಚ್ಚಿದ ಇಸ್ರೇಲ್

Update: 2018-10-17 17:46 GMT

ಜೆರುಸಲೇಮ್, ಅ. 17: ಫೆಲೆಸ್ತೀನ್‌ನಿಂದ ಹಾರಿಸಲ್ಪಟ್ಟ ರಾಕೆಟೊಂದು ಇಸ್ರೇಲ್‌ನ ದಕ್ಷಿಣದ ನಗರ ಬೀರ್‌ಶೆಬಕ್ಕೆ ಅಪ್ಪಳಿಸಿದ ಹಿನ್ನೆಲೆಯಲ್ಲಿ, ಗಾಝಾ ಜೊತೆಗೆ ಇಸ್ರೇಲ್ ಹೊಂದಿರುವ ಎರಡು ಗಡಿದಾಟುಗಳನ್ನು ಮುಚ್ಚಲು ಇಸ್ರೇಲ್ ರಕ್ಷಣಾ ಸಚಿವ ಅವಿಗ್ಡರ್ ಲೈಬರ್‌ಮನ್ ಬುಧವಾರ ಆದೇಶ ನೀಡಿದ್ದಾರೆ.

ಸರಕು ಸಾಗಣೆಗಾಗಿರುವ ಕೆರಮ್ ಶಾಲೊಮ್ ಗಡಿದಾಟು ಮತ್ತು ಜನರಿಗಾಗಿ ಇರುವ ಇರೆಝ್ ಗಡಿದಾಟನ್ನು ಮುಚ್ಚಲು ಲೈಬರ್‌ಮನ್ ಆದೇಶ ನೀಡಿದ್ದಾರೆ ರಕ್ಷಣಾ ಸಚಿವಾಲಯ ತಿಳಿಸಿದೆ.

ಅದೂ ಅಲ್ಲದೆ, ಗಾಝಾ ಕರಾವಳಿಯಲ್ಲಿ ಫೆಲೆಸ್ತೀನಿಯರ ಮೀನುಗಾರಿಕೆಗೆ ಅವಕಾಶವಿರುವ ಮೀನುಗಾರಿಕಾ ವಲಯವನ್ನು ಮೂರು ನಾಟಿಕಲ್ ಮೈಲಿಗೆ ಸೀಮಿತಗೊಳಿಸುವಂತೆಯೂ ಅವರು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News