ಬ್ಯಾಂಕ್ ಸಾಲ ಪಾವತಿಗೆ ಮಲ್ಯರ 6 ಐಷಾರಾಮಿ ಕಾರು ಮಾರಾಟಕ್ಕೆ ಲಂಡನ್ ಕೋರ್ಟ್ ಆದೇಶ

Update: 2018-10-18 05:51 GMT

ಲಂಡನ್, ಅ.18: ಮಾಜಿ ಏರ್‌ಲೈನ್ ಹಾಗೂ ರೇಸಿಂಗ್ ಕಾರುಗಳ ಉದ್ಯಮಿ ವಿಜಯ ಮಲ್ಯ ಭಾರತದ ಬ್ಯಾಂಕ್‌ಗಳ ಒಕ್ಕೂಟದಲ್ಲಿ ಬಾಕಿ ಇಟ್ಟಿರುವ 10,000 ಕೋ.ರೂ. ಸಾಲ ಮರುಪಾವತಿಗೆ ಅವರ ಬಳಿಯಿರುವ 6 ಐಷಾರಾಮಿ ಕಾರುಗಳನ್ನು ಮಾರಾಟ ಮಾಡುವಂತೆ ಆದೇಶಿಸಿ ಲಂಡನ್ ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಾಲಯ ಮಾರಾಟ ಮಾಡಲು ಆದೇಶಿಸಿರುವ ಕಾರುಗಳ ಪೈಕಿ ನಾಲ್ಕು ಕಾರು ವಿಜೆಎಂ ಎಂಬ ಮೊದಲಕ್ಷರವಿರುವ ನಂಬರ್ ಪ್ಲೇಟ್‌ಗಳನ್ನು ಹೊಂದಿವೆ. ಲಂಡನ್ ಹೈಕೋರ್ಟ್‌ನಲ್ಲಿ ಜಸ್ಟಿಸ್ ಕಾಕಿರ್ಲ್ ಅಕ್ಟೋಬರ್ 11 ರಂದು ನೀಡಿರುವ ಆದೇಶದಲ್ಲಿ ಹೈಕೋರ್ಟಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಲ್ಯ ಮಾಲಕತ್ವದ ಆರು ಕಾರುಗಳನ್ನು ಮಾರಾಟ ಮಾಡಲು ಸ್ವಾತಂತ್ರ ಹೊಂದಿದ್ದಾರೆ. ಕಾರುಗಳನ್ನು 404,000 ಪೌಂಡ್‌ಗಿಂತ ಕಡಿಮೆಗೆ ಮಾರುವಂತಿಲ್ಲ ಎಂದು ಜಸ್ಟಿಸ್ ಕಾಕಿರ್ಲ್ ತೀರ್ಪು ನೀಡಿದ್ದರು.

ಲಂಡನ್ ಹೈಕೋರ್ಟ್, ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಲಂಡನ್‌ನಲ್ಲಿರುವ ಮಲ್ಯಗೆ ಸೇರಿರುವ ಎರಡು ಮನೆಯೊಳಗೆ ಪ್ರವೇಶಿಸಿ ಶೋಧ ನಡೆಸಲು ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News