ಶಬರಿಮಲೆ: ‘ನ್ಯೂಯಾರ್ಕ್ ಟೈಮ್ಸ್’ ಪತ್ರಕರ್ತೆಯರನ್ನು ತಡೆದು ವಾಪಸ್ ಕಳುಹಿಸಿದ ಪ್ರತಿಭಟನಕಾರರು
Update: 2018-10-18 12:13 IST
ಶಬರಿಮಲೆ, ಅ.18: ವರದಿಗೆಂದು ಶಬರಿಮಲೆ ದೇವಸ್ಥಾನಕ್ಕೆ ತೆರಳಿದ್ದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಇಬ್ಬರು ಪತ್ರಕರ್ತೆಯರನ್ನು ಪ್ರತಿಭಟನಕಾರರು ತಡೆದು, ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ದಿಲ್ಲಿ ಮೂಲದ ಸುಹಾಸಿನಿ ರಾಜ್ ತನ್ನ ವಿದೇಶಿ ಸಹೋದ್ಯೋಗಿಯ ಜೊತೆ ಶಬರಿಮಲೆಗೆ ತೆರಳಿದ್ದರು. ಆದರೆ ಪ್ರತಿಭಟನಕಾರರು ಅವರನ್ನು ತಡೆದಿದ್ದಾರೆ. ಪತ್ರಕರ್ತೆಯರನ್ನು ಬಲವಂತವಾಗಿ ಹಿಂದಕ್ಕೆ ಕಳುಹಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ.
“ಭಕ್ತರಿಂದ ಭಾರೀ ಪ್ರತಿಭಟನೆ ನಡೆಯುತ್ತಿತ್ತು. ಪ್ರತಿಭಟನಕಾರರು ವರದಿಗಾರ್ತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲಿಂದ ಹಿಂದಿರುಗುವ ಹೊರತು ಬೇರೆ ಆಯ್ಕೆ ಅವರಿಗೆ ಇರಲಿಲ್ಲ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.