ಕಾಸರಗೋಡು : ಸುಪ್ರೀಂಕೋರ್ಟ್‌ ಶಬರಿಮಲೆ ಆದೇಶ ವಿರುದ್ಧ ಪ್ರತಿಭಟನೆ

Update: 2018-10-18 09:30 GMT

ಕಾಸರಗೋಡು, ಅ. 18 : ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸುಪ್ರೀಂಕೋರ್ಟ್‌ನ ಆದೇಶವನ್ನು ಅನುಷ್ಠಾನಗೊಳಿಸಲು ಕೇರಳ ಸರಕಾರ ಮುಂದಾಗಿರುವುದನ್ನು ಪ್ರತಿಭಟಿಸಿ  ಕರೆ ನೀಡಲಾಗಿರುವ ಕೇರಳ ಹರತಾಳ ಕಾಸರಗೋಡು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯಿತು.

ಬಸ್ಸು ಸಂಚಾರ ಪೂರ್ಣವಾಗಿ ಸ್ಥಗಿತಗೊಂಡಿದ್ದು,  ಕೆಲವೇ ಕೆಲ ಖಾಸಗಿ  ವಾಹನಗಳು ರಸ್ತೆಗಿಳಿದಿವೆ . ಅಂಗಡಿ ಮುಂಗಟ್ಟುಗಳು ಮುಚ್ಚಿವೆ, ಶಬರಿಮಲೆ ಸಂರಕ್ಷಣಾ ಸಮಿತಿ ಮತ್ತು  ಅಂತರ್‌ ರಾಷ್ಟ್ರೀಯ ಹಿಂದೂ ಪರಿಷತ್ ಗುರುವಾರ ಕೇರಳದಲ್ಲಿ 24 ಗಂಟೆಗಳ ಹರತಾಳಕ್ಕೆ  ಕರೆ  ನೀಡಿದ್ದು, ಬಿಜೆಪಿ ಬೆಂಬಲ ನೀಡಿದೆ.

ಮಂಜೇಶ್ವರದಲ್ಲಿ  ನಿನ್ನೆ ರಾತ್ರಿ  ಕೆಎಸ್ ಆರ್ ಟಿಸಿ  ಬಸ್ಸಿಗೆ ಕಲ್ಲೆಸೆದ  ಘಟನೆ ನಡೆದಿದೆ. ಪ್ರಯಾಣಿಕರು, ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. 

ತೃಕ್ಕನ್ನಾಡ್ ನಲ್ಲಿ  ಹರತಾಳ ಬೆಂಬಲಿಗರು  ವಾಹನ ತಡೆದ ಘಟನೆ ಇಂದು ಬೆಳಗ್ಗೆ ನಡೆದಿದೆ.  ಜಿಲ್ಲೆಯ ಹಲವೆಡೆ ಸಂಚಾರಕ್ಕೆ ತಡೆಯೊಡ್ಡಿದ ಘಟನೆ ನಡೆದಿದೆ. ರಸ್ತೆಯಲ್ಲಿ  ಕಲ್ಲು ಗಳನ್ನಿಟ್ಟು ರಸ್ತೆ  ಸಂಚಾರ ಬಂದ್  ಮಾಡಿದ  ಘಟನೆ ಯು  ಹಲವೆಡೆ ನಡೆದಿದೆ.

ಇಂದು ಸರಕಾರಿ ರಜೆಯಾದುದರಿಂದ  ಕಚೇರಿಗಳು , ಶಾಲೆಗಳು ಕಾರ್ಯಾಚರಿಸುತ್ತಿಲ್ಲ . ಇದರಿಂದ ನೌಕರರು  ಮತ್ತು ವಿದ್ಯಾರ್ಥಿಗಳ ಮೇಲೆ  ಹರತಾಳದ ಪರಿಣಾಮ  ಬೀರಿಲ್ಲ. ಉಳಿದಂತೆ ಜನಜೀವನ ಅಸ್ತವ್ಯಸ್ಥ ಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News