ಮೋದಿ ವಿರುದ್ಧ ಪಾಕಿಸ್ತಾನದಲ್ಲಿ ಕಾಂಗ್ರೆಸ್ ಪ್ರಾಯೋಜಿತ ಜಾಹೀರಾತು: ಬಿಜೆಪಿ ಆರೋಪ

Update: 2018-10-18 12:33 GMT

ಹೊಸದಿಲ್ಲಿ, ಅ.18: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಪಾಕಿಸ್ತಾನದ ಫೇಸ್‌ಬುಕ್‌ನಲ್ಲಿ ಕಾಂಗ್ರೆಸ್ ಪ್ರಾಯೋಜಿತ ಜಾಹೀರಾತಿನ ಅಭಿಯಾನ ನಡೆಯುತ್ತಿದೆ ಎಂದು ಬಿಜೆಪಿ ಇಂದು ಗಂಭೀರ ಆರೋಪ ಮಾಡಿದೆ.

 ವಿರೋಧ ಪಕ್ಷದ ಜಾಹೀರಾತು, ‘ದೇಶ್ ಬಚಾವೊ, ಮೋದಿ ಹಟಾವೋ’(ದೇಶವನ್ನು ಉಳಿಸಿ, ಮೋದಿಯನ್ನು ತೊಲಗಿಸಿ)ಫೇಸ್‌ಬುಕ್ ಪೇಜ್‌ನ ಪ್ರತಿಗಳನ್ನು ಪ್ರದರ್ಶಿಸಿದ ಬಿಜೆಪಿ ವಕ್ತಾರ ಸಂಬಿತ್ ಬಾತ್ರಾ,ಇದೊಂದು ಗಂಭೀರ ವಿಚಾರವಾಗಿದೆ ಎಂದಿದ್ದಾರೆ.

ಈ ಜಾಹೀರಾತಿನ ಅಥರ್ವೇನು? ನಮ್ಮ ಜನಪ್ರಿಯ ಪ್ರಧಾನಮಂತ್ರಿ ವಿರುದ್ಧ ನೀವು ಪಾಕಿಸ್ತಾನದಲ್ಲಿ ವಿರೋಧಿ ಅಭಿಯಾನ ನಡೆಸುತ್ತಿದ್ದೀರಾ? ಎಂದು ಪಾತ್ರಾ ವಿಪಕ್ಷ ಕಾಂಗ್ರೆಸನ್ನು ಪ್ರಶ್ನಿಸಿದ್ದಾರೆ.

 ನಾನು ದಕ್ಷಿಣ ಭಾರತಕ್ಕಿಂತ ನೆರೆಯ ರಾಷ್ಟ್ರ ಪಾಕಿಸ್ತಾನದೊಂದಿಗೆ ಸಾಂಸ್ಕೃತಿಕವಾಗಿ ನಿಕಟ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೆ ನೀಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿಕೆಯನ್ನು ಉಲ್ಲೇಖಿಸಿದ ಪಾತ್ರಾ, ಇತ್ತೀಚೆಗಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಮೇಲೆ ಹೆಚ್ಚು ಪ್ರೀತಿ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News