ಶಬರಿಮಲೆಯಲ್ಲಿ ದಾಳಿಗೆ ಕರೆ ನೀಡಿದ್ದು ಆರೆಸ್ಸೆಸ್ ನಾಯಕ: ಕೇರಳ ಸಚಿವ ಸುರೇಂದ್ರನ್ ಆರೋಪ

Update: 2018-10-18 13:13 GMT

ಪತ್ತನಂತಿಟ್ಟ, ಅ.18: ಶಬರಿಮಲೆಯಲ್ಲಿ ಉದ್ದೇಶಪೂರ್ವಕವಾಗಿ ಘರ್ಷಣೆಯ ಪರಿಸ್ಥಿತಿಯ ನಿರ್ಮಿಸಲಾಗಿದೆ ಎಂದು ಕೇರಳ ದೇವಸ್ವಂ(ಮುಜರಾಯಿ) ಸಚಿವ ಕಡಕ್ಕಂಪಳ್ಳಿ ಸುರೇಂದ್ರನ್ ಆರೋಪಿಸಿದ್ದಾರೆ.

ಗಲಭೆ ನಡೆಸುವಂತೆ ಆರೆಸ್ಸೆಸ್ ನಾಯಕರೊಬ್ಬರು ಕರೆ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಆರೆಸ್ಸೆಸ್ ನಾಯಕರದ್ದೆನ್ನಲಾದ ಆಡಿಯೋ ಕ್ಲಿಪ್ ಅನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

 ಆರೆಸ್ಸೆಸ್ ಕಾರ್ಯಕರ್ತರು ಭಕ್ತರ ಹಾಗೆ ಇರುಮುಡಿ ಕಟ್ಟಿಕೊಂಡು ಹೋಗಿ ಶಬರಿಮಲೆಯಲ್ಲಿ ನಂಬರ್ ಒಂದಕ್ಕೆ ಕರೆ ಮಾಡಬೇಕು. ನಂತರ ಎಲ್ಲರೂ ಒಂದೆಡೆ ಸೇರಬೇಕು ಎಂದು ಆರೆಸ್ಸೆಸ್ ನಾಯಕ ಆಡಿಯೋ ಕ್ಲಿಪ್ ನಲ್ಲಿ ಕರೆ ನೀಡಿದ್ದಾರೆ ಎಂದವರು ಆರೋಪಿಸಿದರು.  

ಕೇರಳದಲ್ಲಿ ನಿರಂತರ ಸುಳ್ಳುಹೇಳಿ ಗೋಬಲ್ಸ್ ನೀತಿಯನ್ನು ಕಾರ್ಯರೂಪಕ್ಕೆ ತರಲು ಬಿಜೆಪಿ ಯತ್ನಿಸುತ್ತಿದೆ. ಪತ್ರಕರ್ತರ ವಿರುದ್ಧ ದಾಳಿ ನಡೆಸಲು ಕರೆ ನೀಡಲಾಗಿದೆ ಎಂದು ಸುರೇಂದ್ರನ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News