ಪ್ರಧಾನಿ ಶಿರ್ಡಿ ಭೇಟಿಗೆ ಮೊದಲು ಹೋರಾಟಗಾರ್ತಿ ತೃಪ್ತಿ ದೇಸಾಯಿ ಬಂಧನ

Update: 2018-10-19 06:42 GMT

ಹೊಸದಿಲ್ಲಿ, ಅ.19: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶಿರ್ಡಿ ಭೇಟಿಗೆ ಮೊದಲು ಪುಣೆ ಮೂಲದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ಇತ್ತೀಚೆಗೆ ಸುಪ್ರೀಂಕೋರ್ಟ್ ಶಬರಿಮಲೆಗೆ ಸಂಬಂಧಿಸಿ ನೀಡಿದ ತೀರ್ಪಿಗೆ ಸಂಬಂಧಿಸಿ ಪ್ರಧಾನಮಂತ್ರಿ ಮೋದಿ ಅವರೊಂದಿಗೆ ಚರ್ಚಿಸಲು ತನಗೆ ಅನುಮತಿ ನೀಡಬೇಕೆಂದು ಕೋರಿ ಅಹ್ಮದಾಬಾದ್‌ನ ಪೊಲೀಸ್ ಅಧೀಕ್ಷಕರಿಗೆ ಗುರುವಾರ ಪತ್ರ ಬರೆದಿದ್ದರು ಎಂದು ಸುದ್ದಿ ಏಜೆನ್ಸಿ ವರದಿ ಮಾಡಿದೆ.

‘‘ನಾವು ಶಿರ್ಡಿಗೆ ತೆರಳುವ ಮೊದಲೇ ಪೊಲೀಸರು ಬೆಳಗ್ಗೆಯೇ ನನ್ನ ಮನೆಗೆ ಆಗಮಿಸಿದ್ದಾರೆ. ಇದು ತಪ್ಪು. ಪ್ರತಿಭಟನೆ ನಡೆಸುವುದು ನಮ್ಮ ಸಂವಿಧಾನದ ಹಕ್ಕು. ನಮ್ಮನ್ನು ತಡೆದು ಧ್ವನಿಯನ್ನು ಅಡಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ದೇಸಾಯಿ ದೂರಿದರು.

ತೃಪ್ತಿ ದೇಸಾಯಿ ನಿರಂತರ ಹೋರಾಟದ ಫಲವಾಗಿ 2016ರ ಎಪ್ರಿಲ್‌ನಲ್ಲಿ ಮಹಾರಾಷ್ಟ್ರದ ಶನಿ ಶಿಂಗ್ಣಾಪುರ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ದೇವಾಲಯಕ್ಕೆ ಪುರುಷರಿಗೆ ಮಾತ್ರ ಪ್ರವೇಶವಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News