ಬೆಳ್ತಂಗಡಿ ಪಟ್ಟಣ ಪಂಚಾಯತ್ ಚುನಾವಣೆ: 28 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Update: 2018-10-20 13:58 GMT

ಬೆಳ್ತಂಗಡಿ, ಅ. 20: ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾದ ಇಂದು ಇಬ್ಬರು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದು, 11 ಸ್ಥಾನಗಳಿಗೆ 28 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಥಿಸುತ್ತಿದ್ದು  ಬಹುತೇಕ ಕ್ಷೇತ್ರಗಳಲ್ಲಿ ಇವರ  ನಡುವೆ  ನೇರ ಸ್ಪರ್ಥೆ ನಡೆಯುತ್ತಿದೆ. ಬಿಎಸ್‍ಪಿಯಿಂದ ಇಬ್ಬರು ಅಭ್ಯರ್ಥಿಗಳು, ಜಾತ್ಯಾತೀತ ಜನತಾದಳದಿಂದ ಒಬ್ಬರು, ಎಸ್‍ಡಿಪಿಐ ಯಿಂದ ಓರ್ವ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ಅಂತಿಮ ಕಣದಲ್ಲಿರುವವರ  ವಿವರ

ಹಿಂದುಳಿದ ವರ್ಗ ಎ ಮಹಿಳೆ, ಮೀಸಲಾತಿಯಿರುವ 1ನೇ ವಾರ್ಡ್ ಕಾಂಗ್ರೆಸ್‍ನಿಂದ ರಾಜಶ್ರೀ ವಿ. ರಮಣ್, ಬಿಜೆಪಿಯಿಂದ ಸುಶ್ಮಿತಾ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ  2ನೇ ವಾರ್ಡ್ ಕಾಂಗ್ರೆಸ್ ನಿಂದ  ರಮೇಶ್, ಬಿಜೆಪಿಯಿಂದ ಅಂಬರೀಶ್, ಬಿಎಸ್‍ಪಿಯಿಂದ ರಮೇಶ್ ಆರ್., ಸಾಮಾನ್ಯ ಕ್ಷೇತ್ರವಾಗಿರುವ 3ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ನಿಂದ  ಹೆನ್ರಿ ಲೋಬೋ, ಬಿಜೆಪಿಯಿಂದ ಶರತ್ ಕುಮಾರ್, ಸಾಮಾನ್ಯ ಮಹಿಳೆ ಮೀಸಲಾತಿಯಿರುವ  4ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ನಿಂದ ಮಮತಾ ಶೆಟ್ಟಿ, ಬಿಜೆಪಿಯಿಂದ ರಜನಿ ಕುಡ್ವ, ಸಾಮಾನ್ಯ ಕ್ಷೇತ್ರವಾಗಿರುವ 5ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ನಿಂದ  ಜನಾರ್ದನ ಕಂಬಾರ, ಬಿಜೆಪಿಯಿಂದ ಗಣೇಶ್, ಸಾಮಾನ್ಯ ಮಹಿಳೆ ಮೀಸಲಾತಿಯಿರುವ  6ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ನಿಂದ ಮುಝಾರ್ ಜಾನ್  ಮೆಹಬೂಬ್, ಬಿಜೆಪಿಯಿಂದ ರಾಧಿಕಾ, ಎಸ್‍ಡಿಪಿಐನಿಂದ ನಸೀಮಾ ಸಂಜಯನಗರ, ಪರಿಶಿಷ್ಟ ಪಂಗಡ ಮೀಸಲಾತಿಯಿರುವ  7ನೇ ವಾರ್ಡ್ ಕಾಂಗ್ರೆಸ್ ನಿಂದ ಸತೀಶ ನಾಯ್ಕ ಬಿಜೆಪಿಯಿಂದ ಲೋಕೇಶ್,  ಹಿಂದುಳಿದ ವರ್ಗ (ಎ) ಮೀಸಲಾತಿಯಿರುವ  8ನೇ ವಾರ್ಡ್‍ನಲ್ಲಿ  ಕಾಂಗ್ರೆಸ್ ನಿಂದ ಜಗದೀಶ ಡಿ., ಬಿಜೆಪಿಯಿಂದ ಶಂಕರ ಹೆಗ್ಡೆ, ಪಕ್ಷೇತರರಾಗಿ  ಜನಾರ್ದನ ಬಂಗೇರ ಮೂಡಾಯಿಗುತ್ತು.

ಸಾಮಾನ್ಯ ಮಹಿಳೆ ಮೀಸಲಾತಿಯಿರುವ  9ನೇ ವಾರ್ಡ್‍ನಲ್ಲಿ  ಕಾಂಗ್ರೆಸ್ಸಿನಿಂದ ಪ್ರೇಮ ದೇವಾಡಿಗ, ಬಿಜೆಪಿಯಿಂದ ತುಳಸಿ,  ಜತ್ಯಾತೀತ ಜನತಾದಳದಿಂದ ಅನಿತಾ, ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯಿರುವ 10ನೇ ವಾರ್ಡ್ ಕಾಂಗ್ರೆಸ್‍ನಿಂದ ಲತಾ ಕೆ., ಬಿಜೆಪಿಯಿಂದ ಗೌರಿ ಹಾಗೂ ಬಿಎಸ್‍ಪಿಯಿಂದ ಪ್ರೇಮಾ, ಸಾಮಾನ್ಯ ಕ್ಷೇತ್ರವಾಗಿರುವ  11ನೇ ವಾರ್ಡ್‍ನಲ್ಲಿ ಕಾಂಗ್ರೆಸ್ಸಿನಿಂದ ಸತೀಶ ಶೆಟ್ಟಿ, ಬಿಜೆಪಿಯಿಂದ ಜಯಾನಂದ ಗೌಡ, ಪಕ್ಷೇತರ ಅಭ್ಯರ್ಥಿಯಾಗಿ ಮುಗುಳಿ ನಾರಾಯಣ ರಾವ್ ಕಣದಲ್ಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News