ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಅಂತರ್ ರಾಷ್ಟ್ರೀಯ ಯುಎನ್ ಯೂತ್ ಕಾನ್ಫರೆನ್ಸ್

Update: 2018-10-20 14:43 GMT

ಕ್ಯಾಲಿಕಟ್, ಅ.20: ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಮರ್ಕಝ್ ಯುವ ಸಬಲೀಕರಣಕ್ಕಾಗಿ ಇಲ್ಲಿನ ‘ಮರ್ಕಝ್ ನಾಲೆಡ್ಜ್ ಸಿಟಿ’ಯಲ್ಲಿ ಆಯೋಜಿಸಿರುವ ಮೂರು ದಿನಗಳ ಅಂತರ್‌ ರಾಷ್ಟ್ರೀಯ ಯುವ ಕಾನ್ಫರೆನ್ಸ್ ಶುಕ್ರವಾರ ಚಾಲನೆ ದೊರಕಿದೆ.

ಈ ಕಾರ್ಯಕ್ರಮವನ್ನು ಪಂಜಾಬ್ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಕ್ತಿಯುತ ಯುವ ಸಮೂಹ ಮಾತ್ರ ಜಗತ್ತಿಗೆ ಮಾರ್ಗದರ್ಶನ ನೀಡುವುದಲ್ಲದೆ, ರಾಜಕೀಯ ಮತ್ತು ರಾಜತಾಂತ್ರಿಕ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿಯನ್ನು ಹೊಂದಿದೆ. ಅದೇ ರೀತಿ ಈ ಕಾರ್ಯಕ್ರಮವು ಪ್ರತಿನಿಧಿಗಳಿಗೆ ಉನ್ನತ ಕನಸುಗಳನ್ನು ಜೀವನದಲ್ಲಿ ಸಾಧಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಮರ್ಕಝ್‌ನ ಕುಲಪತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈ ಸಮಾವೇಶವು ಭಯೋತ್ಪಾದನೆ ಮತ್ತು ಉಗ್ರಗಾಮಿತ್ವವನ್ನು ಜಾಗತಿಕವಾಗಿ ಸೆಟೆದು ನಿಲ್ಲಬಲ್ಲ ನಾಯಕರನ್ನು ರೂಪಿಸುವ ಉದ್ದೇಶ ಹೊಂದಿದೆ. ಆದ್ದರಿಂದಲೇ ಒಂದು ಶೈಕ್ಷಣಿಕ ಸಂಸ್ಥೆಯಾಗಿ ಮರ್ಕಝ್ ಈ ಕಾರ್ಯಕ್ರಮನ್ನು ಆಯೋಜಿಸಿದೆ ಎಂದು ಹೇಳಿದರು.

ಯುನೈಟೆಡ್ ನೇಶನ್ಸ್‌ನ ಭಾರತೀಯ ಚಳವಳಿಯ ಸಲಹೆಗಾರರಾದ ಮಣಿಶಂಕರ್ ಅಯ್ಯರ್, ಡಾ.ಅಬ್ದುಲ್ ಹಕೀಂ ಅಝ್ಹರಿ, ಅಮೀರ್ ಹಸ್ಸನ್ ಆಸ್ಟ್ರೇಲಿಯ, ಕೃಷ್ಣ ಅಲ್ಲವರು, ಡಾ .ಅಬ್ದುಸಲಾಮ್ ಉದ್ಘಾಟನಾ ಕಾರ್ಯದಲ್ಲಿ ಮಾತನಾಡಿದರು.

ಮರ್ಕಝ್ ಮತ್ತು ವಿಶ್ವಸಂಸ್ಥೆಯ ಉಪ ಸಮಿತಿಗಳು ಜಂಟಿಯಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ 10 ರಾಷ್ಟ್ರಗಳ 300ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News