ದೈಹಿಕ ಚಟುವಟಿಕೆಯಿಂದ ಉತ್ತಮ ಆರೋಗ್ಯ: ಪ್ರಕಾಶ್ ಶೆಣೈ

Update: 2018-10-20 15:57 GMT

ಉಡುಪಿ, ಅ.20: ವ್ಯಾಯಾಮ ಶಾಲೆಯಲ್ಲಿ ಗಂಟೆ ಗಟ್ಟಲೆ ಸಮಯ ಕಳೆ ಯುವುದರ ಬದಲು ಮನೆಯಲ್ಲಿ ಹಾಗೂ ವಠಾರ, ಪರಿಸರವನ್ನು ಸ್ವಚ್ಛಗೊಳಿಸು ವಲ್ಲಿ ನಮ್ಮನ್ನು ತಾವು ತೊಡಗಿಸಿಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ದೇಹವು ನಿರಂತರವಾಗಿ ಚಟುವಟಿಕೆಯಿಂದ ಆರೋಗ್ಯವಾಗಿ ಇರು ವುದಲ್ಲದೆ ನಮ್ಮ ಪರಿಸರವೂ ಸ್ವಚ್ಛವಾಗಿ ಇರಲು ಸಾಧ್ಯವಾಗುತ್ತದೆ ಎಂದು ಉಡುಪಿ ಕಡಿಯಾಳಿಯ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಶೆಣೈ ಹೇಳಿದ್ದಾರೆ.

ಮಣಿಪಾಲ ಈಶ್ವರನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ವತಿ ಯಿಂದ ಈಶ್ವರನಗರ ಬಸ್ ನಿಲ್ದಾಣದಲ್ಲಿ ಶನಿವಾರ ಆಯೋಜಿಸಲಾದ ಸ್ವಚ್ಛತಾ ಅಭಿಯಾನದಲ್ಲಿ ಸ್ವಚ್ಛತಾ ಪರಿಕರಗಳ ಉಪಯೋಗ ಮತ್ತು ತ್ಯಾಜ್ಯ ನಿರ್ವಣೆಗಳ ಬಗ್ಗೆ ಅವರು ಪ್ರಾತ್ಯಕ್ಷತೆ ಮತ್ತು ಉಪನ್ಯಾಸ ನೀಡಿದರು.

ತ್ಯಾಜ್ಯವನ್ನು ಈಗಾಗಲೇ ಕಸ ಎಂದು ಕರೆಯುವುದನ್ನು ನಿಲ್ಲಿಸಲಾಗಿದ್ದು ಘನ ಮತ್ತು ದ್ರವ ಸಂಪನ್ಮೂಲಗಳೆಂದು ವಿಂಗಡಿಸಿ ಮರು ಉಪಯೋಗಗೊಳಿಸಲು ಆಂದೋಲನಗಳು ನಡೆಯುತ್ತಿವೆ ಎಂದರು. ಈ ಸಂದರ್ಭದಲ್ಲಿ ಅವರು ಅಪಾಯಕಾರಿ ತ್ಯಾಜ್ಯಗಳು, ಭೂಮಿಯಲ್ಲಿ ನಶಿಸುವ ತ್ಯಾಜ್ಯಗಳು, ತ್ಯಾಜ್ಯ ದಿಂದ ಜೈವಿಕ ಗೊಬ್ಬರ ತಯಾರಿಸುವ ವಿಧಾನ ಇತ್ಯಾದಿಗಳ ಬಗ್ಗೆ ಪ್ರಾತ್ಯಕ್ಷತೆ ನೀಡಿ ವಿವರಿಸಿದರು.

ಸಂಸ್ಥೆಯ ಅಧ್ಯಕ್ಷ ಡಾ.ಯಜ್ಞೇಶ್ ಶರ್ಮ, ಪ್ರಧಾನ ಕಾರ್ಯದರ್ಶಿ ಹರೀಶ್ ಜಿ.ಕಲ್ಮಾಡಿ, ಕೋಶಾಧಿಕಾರಿ ರಾಘವೇಂದ್ರ ಕಾಮತ್, ಉಪಾಧ್ಯಕ್ಷ ಡಾ.ಸುರೇಶ ರಮಣ ಮಯ್ಯ, ಪದಾಧಿಕಾರಿಗಳಾದ ಡಾ.ಶಿವಪ್ರಸಾದ್, ಗೌರವ ಸಲಹೆಗಾರ ಶ್ರೀನಿವಾಸ್ ರಾವ್, ಕಲಾವಿದ ಶ್ರೀನಾಥ್ ಮಣಿಪಾಲ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಸಂತೋಷ್, ಸಿದ್ಧಾಂತ್, ರಕ್ಷಿತ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News