ಮಂಗಳೂರಿನಲ್ಲಿ ಬೃಹತ್ ಶರೀಹತ್ ಸಂರಕ್ಷಣಾ ಸಮಾವೇಶ

Update: 2018-10-20 16:20 GMT

ಮಂಗಳೂರು, ಅ.20:ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಬೃಹತ್ ಶರೀಹತ್ ಸಂರಕ್ಷಣಾ ಸಮಾವೇಶವು ಮಂಗಳೂರು ನೆಹರು ಮೈದಾನದಲ್ಲಿ ನಡೆಯಲಿದೆ.

ಈ ಬಗ್ಗೆ ತಯಾರಿ ಹಿನ್ನೆಲೆಯಲ್ಲಿ ಅ.25ರಂದು ಗುರುವಾರ ಅಪರಾಹ್ಣ 2 ಗಂಟೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಸಭಾಂಗಣದಲ್ಲಿ ಸ್ವಾಗತ ಸಮಿತಿ ರಚಿಸಲಾಗುವುದು. ಈ ಸಭೆಗೆ ಸಮಸ್ತದ ಎಲ್ಲಾ ಪೋಷಕ ಸಂಘಟನೆಯ ನಾಯಕರು ಹಾಜರಾಗಬೇಕು ಎಂದು ಪ್ರಧಾನ ಸಂಚಾಲಕರಾದ ಹಾಜಿ ಅಬ್ದುಲ್ ಅಝೀಝ್ ದಾರಿಮಿ  ತಿಳಿಸಿದ್ದಾರೆ.

ಕೇಂದ್ರ ಸರಕಾರ ಹೊರಡಿಸಿರುವ ತ್ರಿವಳಿ ತಲಾಖಿನ ಬಗ್ಗೆ ಆರ್ಡಿನೆನ್ಸ್, ನಮಾಝಿಗೆ ಮಸೀದಿ ಅನಿವಾರ್ಯವಲ್ಲವೆಂದು ಅದು ಇಸ್ಲಾಮಿನ ಅವಿಭಾಜ್ಯ ಅಂಗವಲ್ಲವೆಂದು, ಸಲಿಂಗರತಿ ಮತ್ತು ಅವಿವಾಹಿತ ಲೈಂಗಿಕ ಸಂಪರ್ಕ ಅಪರಾಧ ಅಲ್ಲವೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮುಸ್ಲಿಂ ಸಮಾಜದಲ್ಲಿ ಗೊಂದಲವನ್ನುಂಟು ಮಾಡಿದ್ದು. ಅದು ಧಾರ್ಮಿಕ ,ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಭಯದ ವಾತವರಣವನ್ನು ಉಂಟು ಮಾಡಿರುತ್ತದೆ. ಈ ಗೊಂದಲಕ್ಕೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ರಾಜಕೀಯ ನಾಯಕರು, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News