ಬಿಎಸ್ಸೆನ್ನೆಲ್ ನಿವೃತ್ತ ಎಜಿಎಂ ಹೆಗಡೆ ನಿಧನ

Update: 2018-10-20 16:52 GMT

ಮಂಗಳೂರು, ಅ.20: ಬಿಎಸ್ಸೆನ್ನೆಲ್‌ನ ನಿವೃತ್ತ ಸಹಾಯಕ ಮಹಾಪ್ರಬಂಧಕ (ಎಜಿಎಂ) ಎಸ್.ಎಂ. ಹೆಗಡೆ (62) ಹೃದಯಾಘಾತದಿಂದ ಹೊನ್ನಾವರದ ಸ್ವಗೃಹದಲ್ಲಿ ಶನಿವಾರ ನಿಧನ ಹೊಂದಿದರು.

ಮೃತರು ಪತ್ನಿ ಟೆಲಿಕಾಂನ ನಿವೃತ್ತ ಉದ್ಯೋಗಿ ಗಿರಿಜಾ ಮತ್ತು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮೂಲತಃ ಹೊನ್ನಾವರದ ಹಡಿನಬಾಳು ನಿವಾಸಿಯಾಗಿದ್ದ ಅವರು, ಹಲವು ವರ್ಷ ಕಾಲ ಬಿಎಸ್ಸೆನ್ನೆಲ್ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ನಿವೃತ್ತಿಯ ಬಳಿಕವೂ ಸಾಂಸ್ಕೃತಿಕ/ ಯಕ್ಷಗಾನ ಕ್ಷೇತ್ರಗಳಲ್ಲಿ ಪೋಷಕರಾಗಿ ಚಟುವಟಿಕೆಯಿಂದ ಇದ್ದರು. ಮಂಗಳೂರಿನಲ್ಲಿ ಮನೆಯನ್ನು ಹೊಂದಿದ್ದ ಅವರು, ಕೆಲವು ದಿನಗಳ ಹಿಂದೆ ಹೊನ್ನಾವರಕ್ಕೆ ತೆರಳಿದ್ದರು. ಶನಿವಾರ ಮಧ್ಯಾಹ್ನ ಅವರ ದೇಹವನ್ನು ಮಂಗಳೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News