ಅ. 20ರಿಂದ ಶ್ವಾಸಕೋಶದ ಯೋಗಕ್ಷೇಮಕ್ಕೆ ದಸರಾಯೋಗ

Update: 2018-10-20 17:06 GMT

ಮಂಗಳೂರು, ಅ. 20: ಅವಿಷ್ಕಾರ ಯೋಗ ಮತ್ತು ಮಂಗಳಾ ಯೋಗ ವಿಜ್ಞಾನ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಗರದ ಆರು ಕೇಂದ್ರಗಳಲ್ಲಿ ವೃತ್ತಿಪರ ಯೋಗ ಚಿಕಿತ್ಸಕರಿಂದ ದಸರಾಯೋಗ ಶಿಬಿರವು ಅ. 20ರಿಂದ 28ರ ವರೆಗೆ ನಡೆಯಲಿದೆ. 

ಆವಿಷ್ಕಾರ ಯೋಗ ಬಿಜೈನಲ್ಲಿ 6 ರಿಂದ 7, 10ರಿಂದ 11ಹಾಗೂ ಸಂಜೆ 7 ರಿಂದ 8 ರವರೆಗೆ, ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಯಲ್ಲಿ ಸಂಜೆ 4 ರಿಂದ 5 ಹಾಗೂ 5 ರಿಂದ 6ರವರೆಗೆ ಯೋಗಕ್ಷೇಮ, ಪಂಪವೆಲ್‍ನಲ್ಲಿ ಬೆಳಗ್ಗೆ 6ರಿಂದ 7 ಹಾಗೂ ಸಂಜೆ 5.30 ರಿಂದ 6.30ರವರೆಗೆ, ಭಾರತೀಯ ವಿದ್ಯಾಭವನ, ಪಾಂಡೇಶ್ವರದಲ್ಲಿ ಸಂಜೆ 4 ರಿಂದ 5ರವರೆಗೆ ದೀವ್ಯಾಸ್‍ ಕೇಂದ್ರ ತೊಕ್ಕೊಟ್ಟುನಲ್ಲಿ ಬೆಳಗ್ಗೆ 6ರಿಂದ 7ರ ಹಾಗೂ ಸಂಜೆ 5.30 ರಿಂದ 6.30 ರವರೆಗೆ ಹಾಗೂ ಮೈತ್ರಿ ಸ್ಪೆಷಾಲಿಟಿ ಕ್ಲಿನಿಕ್ ಬೆಂದೂರ್‍ವೆಲ್‍ನಲ್ಲಿ ಬೆಳಗ್ಗೆ 6ರಿಂದ 7ರ ವರೆಗೆ ನಡೆಯಲಿದೆ. 

ಶಿಬಿರದಲ್ಲಿ ಶ್ವಾಸಕೋಶದ ಆರೋಗ್ಯದ ಜಾಗೃತಿ ಮಾಹಿತಿಯೊಂದಿಗೆ ಯೋಗಾಭ್ಯಾಸದ ಕ್ರಿಯೆ, ಆಸನ ಪ್ರಾಣಾಯಾಮ, ವಿಶ್ರಾಂತಿ ಹಾಗೂ ದ್ಯಾನದ ತರಬೇತಿ ನೀಡಲಾಗುವುದು. ಶಿಬಿರಕ್ಕೆ ಉಚಿತ ಪ್ರವೇಶವಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಯೋಗ ಚಿಕಿತ್ಸಕರಾದ ಕುಶಾಲಪ್ಪಜಿ.ಯನ್. 9845588740, 9591130105 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News