ಮುಸ್ಲಿಮ್ ಅಲ್ಪಸಂಖ್ಯಾತ ವ್ಯಕ್ತಿಗೆ ಅಭ್ಯರ್ಥಿತನ: ಸಾಮಾಜಿಕ ಜಾಲತಾಣದಲ್ಲಿ ಸಮೀಕ್ಷೆ ಅಭಿಯಾನಕ್ಕೆ ಚಾಲನೆ

Update: 2018-10-20 17:15 GMT

ಮಂಗಳೂರು, ಅ. 20: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷದಿಂದ ಓರ್ವ ಸಮರ್ಥ ಮುಸ್ಲಿಮ್ ಅಲ್ಪಸಂಖ್ಯಾತ ವ್ಯಕ್ತಿಗೆ ಅಭ್ಯರ್ಥಿತನ ಬೇಡಿಕೆಗೆ ಪೂರಕವಾಗಿ ಜಿಲ್ಲೆಯ ಪ್ರಮುಖ ವಾಟ್ಸ್‌ಆ್ಯಪ್  ತಂಡವೊಂದರ ನೇತೃತ್ವದಲ್ಲಿ ‘ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯದಿಂದ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಆನ್‌ಲೈನ್ ಮತ ಚಲಾವಣೆ ಪ್ರಕ್ರಿಯೆಗೆ ದ.ಕ.ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಲಹಾ ಸಮಿತಿಯ ಉಪಾಧ್ಯಕ್ಷ ಶಾಹುಲ್ ಹಮೀದ್, ಮತ್ಸ್ಯ ವರ್ತಕರ ಸಂಘದ ಅಧ್ಯಕ್ಷ ಸಿ.ಎಂ ಮುಸ್ತಫಾ, ಸದಸ್ಯರಾದ ಮೊಯ್ದಿನ್ ಮೋನು, ಸಿ.ಎಂ. ಹನೀಫ್ ಅವರು ಜಂಟಿಯಾಗಿ ಶುಕ್ರವಾರ ಲಾಂಛನ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

ಅಭ್ಯರ್ಥಿತನಕ್ಕೆ ಪ್ರಮುಖ ನಾಯಕರನ್ನು ಆಯ್ಕೆ ಮಾಡುವ ಆನ್‌ಲೈನ್ ಮತ ಚಲಾವಣಾ ಲಿಂಕ್ ಅನ್ನು ಮುಸ್ಲಿಮ್ ಒಕ್ಕೂಟ ವಾಟ್ಸ್‌ಆ್ಯಪ್ ಗ್ರೂಫ್‌ನ ಹಿರಿಯ ಸದಸ್ಯ ಯಾಕೂಬ್ ಗಂಜಿಮಠ ಬಿಡುಗಡೆಗೊಳಿಸಿದರು.

ಪ್ರಧಾನ ಆ್ಯಡ್ಮಿನ್ ಅಶ್ಫಾಕ್ ತೋಟಾಲ್ ಸ್ವಾಗತಿಸಿದರು. ಇಸಾಕ್ ಮಠ ಮತದಾನದ ಲಿಂಕ್ ನಿರ್ವಹಣೆಗೊಳಿಸಿದರು. ಮುಹಮ್ಮದ್ ಹನೀಫ್ ಯು. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಇತರ ಎಡ್ಮಿನ್‌ಗಳು, ಸದಸ್ಯರು, ಅತಿಥಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News