ರಷ್ಯದೊಂದಿಗಿನ ಅಣು ಒಪ್ಪಂದದಿಂದ ಹಿಂದೆ ಸರಿಯಲಿರುವ ಅಮೆರಿಕ

Update: 2018-10-21 13:05 GMT

ವಾಷಿಂಗ್ಟನ್,ಅ.21: ರಷ್ಯದೊಂದಿಗಿನ ಅಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಲು ನಿರ್ಧರಿಸಿದೆ. 1987ರ ಐಎನ್‍ಎಫ್ ಒಪ್ಪಂದವನ್ನು ರಷ್ಯ ಉಲ್ಲಂಘಿಸಿದೆ ಎಂದು ಅಮೆರಿಕ ಆರೋಪಿಸಿದ್ದು, ಈ ಕಾರಣದಿಂದ ರಷ್ಯದೊಂದಿಗಿನ  ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಡೊನಾಲ್ಡ್ ಟ್ರಂಪ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ಒಪ್ಪಂದದಲ್ಲಿ 500ರಿಂದ 3, 500 ಕಿಲೊಮೀಟರ್ ದೂರ ಪ್ರಹಾರ ಸಾಮರ್ಥ್ಯದ ಮಿಸೈಲ್‍ಗಳ ಉಪಯೋಗವನ್ನು ನಿಷೇಧಿಸಲಾಗಿತ್ತು. ಇದನ್ನು ರಷ್ಯ ಉಲ್ಲಂಘಿಸಿದೆ. ಆದರೆ ಒಪ್ಪಂದದಿಂದ ಹೊರಹೋದರೂ ಭಾರೀ ಪ್ರಮಾಣದಲ್ಲಿ ಆಯುಧ ನಿರ್ಮಿಸಲು ರಷ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ರಷ್ಯ ಹಲವು ಬಾರಿ ಒಪ್ಪಂದ ಉಲ್ಲಂಘಿಸಿದೆ, ಹಾಗಿದ್ದೂ ಅಮೆರಿಕ ಹಿಂದಿನ ಅಧ್ಯಕ್ಷ ಒಪ್ಪಂದದಿಂದ ಯಾಕೆ ಹಿಂದೆ ಸರಿದಿಲ್ಲ ಎಂದು ಟ್ರಂಪ್ ಪ್ರಶ್ನಿಸಿದರು.

2014ರಲ್ಲಿ ರಷ್ಯ ಐಎನ್‍ಎಫ್ ಒಪ್ಪಂದ ಉಲ್ಲಂಘಿಸಿದೆ ಎಂದು ಬರಾಕ್ ಒಬಾಮ ಹೇಳಿದ್ದರು. ಆದರೆ, ಯುರೋಪಿಯನ್ ಯೂನಿಯನ್‍ನ ಬಲವಾದ ಒತ್ತಡವಿದ್ದುದರಿಂದ ಅಂದು ಒಬಾಮ ಒಪ್ಪಂದದಿಂದ ಹಿಂದೆ ಸರಿದಿರಲಿಲ್ಲ. ಇದೇ ವೇಳೆ ರಷ್ಯ ಅಮೆರಿಕದ ವರ್ತನೆಯನ್ನು ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News