ಮಂಗಳೂರು: ‘ಎಫ್‌ಬಿಬಿ’ ಉಡುಪು ಸಂಗ್ರಹ ಪ್ರದರ್ಶನಕ್ಕೆ ರಿಷಬ್ ಶೆಟ್ಟಿ ಚಾಲನೆ

Update: 2018-10-21 16:47 GMT

ಮಂಗಳೂರು, ಅ.21: ಭಾರತದ ಉಡುಪುಗಳ ಖ್ಯಾತ ಬ್ರಾಂಡ್ ಎಫ್‌ಬಿಬಿ ಹಬ್ಬದ ಸಂದರ್ಭದಲ್ಲಿ ಹಮ್ಮಿಕೊಂಡ ವಿಶೇಷ ಉಡುಪುಗಳ ಸಂಗ್ರಹ ಪ್ರದರ್ಶನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಲನಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ನಗರದ ಸಿಟಿಸೆಂಟರ್ ಮಾಲ್‌ನಲ್ಲಿ ರವಿವಾರ ಚಾಲನೆ ನೀಡಿದರು.

ಕನ್ನಡ ಶಾಲೆ ಉಳಿಸಿ

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರಿಷಬ್ ಶೆಟ್ಟಿ, ಕನ್ನಡ ಶಾಲೆಗಳು ಉಳಿಯಬೇಕು ಎನ್ನುವ ಆಶಯದೊಂದಿಗೆ ನಿರ್ಮಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರಕ್ಕೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತು 75 ದಿನ ಪ್ರದರ್ಶನ ಕಾಣುವಂತಾಗಿದೆ. ಕನ್ನಡಿಗರ ಬೆಂಬಲಕ್ಕೆ ವಂದನೆ ಅರ್ಪಿಸಿದರು.

ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳನ್ನು ಬೆಂಬಲಿಸಿ ಕನ್ನಡ ಶಾಲೆ ಉಳಿಸಿ. ಅದೇ ರೀತಿ ಮಕ್ಕಳು, ಪುರುಷರು, ಮಹಿಳೆಯರಿಗೆ ಸೇರಿದಂತೆ ಎಲ್ಲರಿಗೂ ಬೇಕಾದ ಉಡುಪುಗಳನ್ನು ಹೊಂದಿರುವ ಎಫ್‌ಬಿಬಿ ಮಳಿಗೆಯನ್ನು ಬೆಂಬಲಿಸಿ ಎಂದು ರಿಷಬ್ ಶೆಟ್ಟಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಖ್ಯಾತ ರೂಪದರ್ಶಿಗಳಿಂದ ಎಫ್‌ಬಿಬಿ ಉಡುಪುಗಳ ಪ್ರದರ್ಶನ, ಮನರಂಜನಾ ಕಾರ್ಯಕ್ರಮ ನಡೆಯಿತು. ದೇಶಾದ್ಯಂತ ಇರುವ ಎಫ್‌ಬಿಬಿ ಮತ್ತು ಬಿಗ್ ಬಝಾರ್ ಮಳಿಗೆಗಳಲ್ಲಿ ಈ ವಿಶೇಷ ಸಂಗ್ರಹ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಬಿಗ್ ಬಝಾರ್ ಎಫ್‌ಬಿಬಿ ಮಳಿಗೆಯ ಸ್ಟೋರ್ ಮ್ಯಾನೇಜರ್‌ಗಳಾದ ಮಾರನ್ ಹಾಗೂ ಶಿವಕುಮಾರ್ ಅವರು ರಿಷಬ್ ಶೆಟ್ಟಿ ಹಾಗೂ ಅವರ ತಂಡವನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News