ಬ್ರಹ್ಮಾವರ: ರಿಕ್ಷಾದಲ್ಲೇ ಕುಳಿತು ಚಾಲಕ ಮೃತ್ಯು

Update: 2018-10-21 15:37 GMT

ಬ್ರಹ್ಮಾವರ, ಅ.21: ನೀಲಾವರ ಗುಡ್ಡೆ ಎಂಬಲ್ಲಿ ರಿಕ್ಷಾ ಚಾಲಕರೊಬ್ಬರು ತನ್ನ ರಿಕ್ಷಾದ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ರಿಕ್ಷಾ ಚಾಲಕ ಪಿಯುಸ್ ಡಿಸೋಜ (45) ಎಂದು ಗುರುತಿಸಲಾಗಿದೆ. ನೀಲಾವರ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಇವರು, ಅ.20ರಂದು ಬೆಳಗ್ಗೆ ಆಟೋ ರಿಕ್ಷಾದಲ್ಲಿ ನೀಲಾವರ ಗುಡ್ಡೆಯ ಬಳಿ ಬಾಡಿಗೆಗೆ ಹೋಗಿದ್ದರು. ಅಲ್ಲಿ ಅವರು ಹಿಂಬದಿ ಸೀಟಿನಲ್ಲಿ ಕುಳಿತಲ್ಲಿಯೇ ಹೃದಯಾಘಾತ ಅಥವಾ ಬೇರೆ ಯಾವುದೋ ದೈಹಿಕ ಖಾಯಿಲೆ ಯಿಂದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News