×
Ad

ಕಾಪು: ವಿದ್ಯುತ್ ಶಾಕ್‌ನಿಂದ ಇಲೆಕ್ಟ್ರೀಶನ್ ಮೃತ್ಯು

Update: 2018-10-21 21:35 IST

ಕಾಪು, ಅ.21: ಉದ್ಯಾವರ ಗ್ರಾಮದ ಯಶಸ್ವಿ ಫಿಶ್‌ಮಿಲ್ ನ ಇಲೆಕ್ಟ್ರೀಶನ್ ಒಬ್ಬರು ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಘಟನೆ ಶನಿವಾರ ಸಂಜೆ ವೇಳೆ ನಡೆದಿದೆ.

ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಿವಾಸಿ ಆನಂದು ಬೀರಾ ಗೌಡ ಎಂಬವರ ಮಗ ಸೀತಾರಾಮ ಗೌಡ (26) ಎಂದು ಗುರುತಿಸಲಾಗಿದೆ.

ಫಿಶ್‌ಮಿಲ್ ನ ಇಲೆಕ್ಟ್ರಿಕಲ್ ಶಿಫ್ ಇನ್ ಚಾರ್ಚ್ ಆಗಿರುವ ಸೀತಾರಾಮ ಗೌಡ ಮೈನ್ ಸ್ವಿಚ್ ಆಫ್ ಮಾಡದೆ ಇಂಡಸ್ಟ್ರೀಯಲ್ ಚಿಲ್ಲರ್‌ನಲ್ಲಿ ರಿಪೇರಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಶಾಕ್‌ನಿಂದ ಸೀತಾರಾಮ ಗೌಡ ಅಸ್ವಸ್ಥ ಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News