ಗಾಝಾ ಗಡಿದಾಟುಗಳನ್ನು ತೆರೆಯಲು ಇಸ್ರೇಲ್ ಆದೇಶ

Update: 2018-10-21 17:47 GMT

ಜೆರುಸಲೇಮ್, ಅ. 21: ಹಿಂಸಾಚಾರ ಇಳಿಮುಖವಾದ ಹಿನ್ನೆಲೆಯಲ್ಲಿ, ಕೆರಮ್ ಶಾಲೊಮ್ ಮತ್ತು ಎರೆಝ್ ಗಡಿದಾಟುಗಳನ್ನು ತೆರೆಯುವಂತೆ ಇಸ್ರೇಲ್ ರವಿವಾರ ಆದೇಶಿಸಿದೆ ಎಂದು ‘ಜೆರುಸಲೇಮ್ ಪೋಸ್ಟ್’ ವರದಿ ಮಾಡಿದೆ.

ಗಾಝಾ ಪಟ್ಟಿ ಮತ್ತು ಇಸ್ರೇಲ್ ಗಡಿಯ ಕೇಂದ್ರ ಭಾಗದಲ್ಲಿರುವ ಕೆರಮ್ ಶಾಲೊಮ್ ಗಡಿದಾಟಿನ ಮೂಲಕ ಟ್ರಕ್‌ಗಳು ಇಸ್ರೇಲ್ ಅಥವಾ ಈಜಿಪ್ಟ್‌ನಿಂದ ಗಾಝಾ ಪಟ್ಟಿಗೆ ಸರಕುಗಳನ್ನು ಸಾಗಿಸುತ್ತವೆ ಹಾಗೂ ಎರೆಝ್ ಗಡಿದಾಟಿನ ಮೂಲಕ ಜನರು ಸಂಚರಿಸುತ್ತಾರೆ.

‘‘ವಾರಾಂತ್ಯದಲ್ಲಿ ಗಾಝಾದಲ್ಲಿ ಹಿಂಸಾತ್ಮಕ ಘಟನೆಗಳು ಇಳಿಮುಖವಾದ ಹಿನ್ನೆಲೆಯಲ್ಲಿ ಹಾಗೂ ಪ್ರತಿಭಟನಕಾರರನ್ನು ನಿಯಂತ್ರಿಸಲು ಹಮಾಸ್ ಕ್ರಮಗಳನ್ನು ತೆಗೆದುಕೊಂಡ ಬಳಿಕ ಇಸ್ರೇಲ್ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಅವಿಗ್ಡರ್ ಲೈಬರ್‌ಮನ್‌ರ ಕಚೇರಿ ಹೊರಡಿಸಿದ ಹೇಳಿಕೆಯೊಂದು ತಿಳಿಸಿದೆ.

ಬುಧವಾರ ಗಾಝಾದಿಂದ ಹಾರಿದ ರಾಕೆಟೊಂದು ದಕ್ಷಿಣ ಇಸ್ರೇಲ್‌ನ ಮನೆಯೊಂದರ ಮೇಲೆ ಅಪ್ಪಳಿಸಿದ ಬಳಿಕ ಈ ಗಡಿದಾಟುಗಳನ್ನು ಮುಚ್ಚಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News