ಬೆಡೂಯಿನ್ ಗ್ರಾಮ ಧ್ವಂಸ ಯೋಜನೆಯನ್ನು ಮುಂದೂಡಿದ ಇಸ್ರೇಲ್

Update: 2018-10-21 17:52 GMT

ಜೆರುಸಲೇಮ್, ಅ. 21: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಆಯಕಟ್ಟಿನ ಬೆಡೂಯಿನ್ ಗ್ರಾಮವನ್ನು ಧ್ವಂಸಗೊಳಿಸುವ ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದೂಡಿದ್ದಾರೆ ಎಂದು ಅವರ ಕಚೇರಿ ರವಿವಾರ ತಿಳಿಸಿದೆ.

‘‘ಮಾತುಕತೆಗಳಿಗೆ ಅವಕಾಶ ನೀಡಲು ಹಾಗೂ ವಿವಿಧ ಸಂಸ್ಥೆಗಳಿಂದ ಇತ್ತೀಚಿನ ದಿನಗಳಲ್ಲಿ ನಾವು ಪಡೆದಿರುವ ಕೊಡುಗೆಗಳ ಬಗ್ಗೆ ಚರ್ಚಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ನೆತನ್ಯಾಹು ಕಚೇರಿ ಹೇಳಿದೆ.

ಜೆರುಸಲೇಮ್‌ನ ಪೂರ್ವದಲ್ಲಿರುವ ಈ ಸಣ್ಣ ಗ್ರಾಮವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಹಾಗೂ ತಮ್ಮ ಮನೆಗಳನ್ನು ಧ್ವಂಸಗೊಳಿಸಿ ಅಲ್ಲಿಂದ ತೆರಳಲು ಅಕ್ಟೋಬರ್ ತಿಂಗಳ ಆರಂಭದವರೆಗೆ ಅಲ್ಲಿನ ನಿವಾಸಿಗಳಿಗೆ ಗಡುವು ನೀಡಲಾಗಿತ್ತು ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಗ್ರಾಮವನ್ನು ಧ್ವಂಸಗೊಳಿಸದಂತೆ ಐರೋಪ್ಯ ದೇಶಗಳು ಇಸ್ರೇಲ್‌ಗೆ ಕರೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News