ಅಫ್ಘಾನ್: ಮತದಾನದ ವೇಳೆ ಬಾಂಬ್ ಸ್ಫೋಟ; 11 ಸಾವು

Update: 2018-10-21 17:53 GMT

ಕಾಬೂಲ್, ಅ. 21: ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತದಲ್ಲಿ ರವಿವಾರ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 11 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಆರು ಮಕ್ಕಳೂ ಸೇರಿದ್ದಾರೆ.

ಅಫ್ಘಾನಿಸ್ತಾನದ ಸಂಸದೀಯ ಚುನಾವಣೆಯ ಎರಡನೇ ದಿನದಂದು ಈ ದಾಳಿ ಸಂಭವಿಸಿದೆ.

ಶನಿವಾರ ಚುನಾವಣೆ ನಡೆದಿದ್ದು, ಬಾಂಬ್ ಸ್ಫೋಟಗಳು ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ ಮತದಾನದಲ್ಲಿ ಗಂಟೆಗಟ್ಟಳೆ ವಿಳಂಬವಾದ ಹಿನ್ನೆಲೆಯಲ್ಲಿ ಎರಡನೇ ದಿನಕ್ಕೆ ವಿಸ್ತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News