ಧಾರ್ಮಿಕ ಗುರುಗಳ ಪ್ರಭಾವ ಬಳಸಿ ನೌಹೇರಾ ಶೇಖ್ ವಂಚನೆ : ವರದಿ

Update: 2018-10-22 14:50 GMT

ಹೈದರಾಬಾದ್, ಅ.21: ಹೀರಾ ಗೋಲ್ಡ್ ಸಂಸ್ಥೆಯ ಮೂಲಕ 20 ಸಾವಿರ ಕೋಟಿ ರೂ. ಗೂ ಹೆಚ್ಚಿನ ಮೊತ್ತದ ವಂಚನೆಎಸಗಿರುವ ಪ್ರಕರಣದಲ್ಲಿ ಅಮಾಯಕ ಜನತೆಯನ್ನು ನಂಬಿಸಲು ನೌಹೇರಾ ಶೇಖ್ ಉಲೆಮಾ (ಮುಸ್ಲಿಂ ಧರ್ಮಗುರು)ಗಳಹಾಗೂ ಧಾರ್ಮಿಕ ವಿದ್ವಾಂಸರ ಸೇವೆಯನ್ನು ಬಳಸಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.

ಜನತೆ ಕಷ್ಟಪಟ್ಟು ಒಟ್ಟುಗೂಡಿಸಿದ ಹಣವನ್ನು ನೌಹೇರಾ ಶೇಖ್ ಅವರ ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ.ನೌಹೇರಾ ಅವರು ಆಯೋಜಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಧರ್ಮಗುರುಗಳ ಉಪಸ್ಥಿತಿಯಿಂದ ಪ್ರಭಾವಿತರಾಗಿ ತಾವುನೌಹೇರಾ ಬಗ್ಗೆ ವಿಶ್ವಾಸ ಬೆಳೆಸಿಕೊಂಡಿದ್ದೆವು ಎಂದು ಹೂಡಿಕೆದಾರರು ಈಗ ಹೇಳಿಕೆ ನೀಡಿದ್ದಾರೆ. ಕಳೆದ ಮಂಗಳವಾರನೌಹೇರಾ ಶೇಖ್‌ರನ್ನು ಹೈದರಾಬಾದ್‌ನಲ್ಲಿ ಪೊಲೀಸರು ಬಂಧಿಸಿದ್ದರು.

ನೌಹೇರಾ ತನಗೆ ಇಸ್ಲಾಂ ಧರ್ಮಗುರುಗಳು ಹಾಗೂ ಧಾರ್ಮಿಕ ವಿದ್ವಾಂಸರ ಬೆಂಬಲ ಮತ್ತು ಪ್ರೋತ್ಸಾಹ ಇರುವುದಾಗಿಜನರಲ್ಲಿ ನಂಬಿಕೆ ಮೂಡಿಸಿದ್ದರು.

ಹೀರಾ ಸಮೂಹ ಹೂಡಿಕೆ ವಂಚನೆ ಹಗರಣದಲ್ಲಿ ಹಲವು ಧಾರ್ಮಿಕ ಮುಖಂಡರ ಹೆಸರು ಕೇಳಿ ಬಂದಿತ್ತು. ಧಾರ್ಮಿಕಮುಖಂಡರೊಬ್ಬರ ಹೇಳಿಕೆ ಆಧರಿಸಿ ತಾನು ಹೀರಾ ಸಮೂಹದಲ್ಲಿ ದೊಡ್ಡ ಮೊತ್ತ ಹೂಡಿಕೆ ಮಾಡಿದ್ದೆ ಎಂದು ಓರ್ವಸಂತ್ರಸ್ತ ಹೈದರಾಬಾದ್ ಪೊಲೀಸರಲ್ಲಿ ತಿಳಿಸಿದ್ದಾರೆ.

ನೌಹೇರಾ ಶೇಖ್, ಉತ್ತರಪ್ರದೇಶದ ಮೌಲನಾ ಮೆರಾಜ್ ರಬ್ಬಾನಿ, ಮೌಲನಾ ಅರ್ಶದ್ ಬಷೀರ್ ಮದನಿ ಹಾಗೂಮೌಲನಾ ಜಲಾಲುದ್ದೀನ್ ಖಾಸಿಮಿ ಅವರ ಹಲಾಲ್ ವ್ಯವಹಾರ ಹಾಗೂ ಇಸ್ಲಾಂ ಕುರಿತ ಉಪನ್ಯಾಸಗಳಿಂದ ತಾನು ಪ್ರೇರಿತನಾಗಿರುವುದಾಗಿ ಹೂಡಿಕೆದಾರ ಮುಹಮ್ಮದ್ ಅಬ್ದುಲ್ ಮಜೀದ್ ಹೇಳಿದ್ದಾರೆ. ಅವರ ಹೇಳಿಕೆಯನ್ನು ಸೆಂಟ್ರಲ್ಕ್ರೈಮ್ ಸ್ಟೇಶನ್ ಪುರಾವೆಯಾಗಿ ದಾಖಲು ಮಾಡಿಕೊಂಡಿದೆ.

ಹೀರಾ ಸಮೂಹ 15ಕ್ಕೂ ಅಧಿಕ ಕಂಪೆನಿಗಳ ಒಕ್ಕೂಟ. ಭಾರತ ಹಾಗೂ ವಿದೇಶದಲ್ಲೂ ಇದರ ಶಾಖೆಗಳಿವೆ.ಭಾರತದಾದ್ಯಂತ ಇದರ 160ಕ್ಕೂ ಅಧಿಕ ಬ್ಯಾಂಕ್ ಖಾತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News