×
Ad

ಉಡುಪಿ : ಅಡುಗೆಯವರಿಗೆ ನಿರ್ವಹಣೆ, ವಿಕಸನ ತರಬೇತಿ ಕಾರ್ಯಗಾರ ಉದ್ಘಾಟನೆ

Update: 2018-10-22 19:36 IST

ಉಡುಪಿ, ಅ.22: ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹೊಸದಾಗಿ ನೇಮಕಗೊಂಡ ಅಡುಗೆಯವರು ಮತ್ತು ಅಡುಗೆ ಸಹಾಯಕರಿಗೆ ಉಡುಪಿಯ ರಾಷ್ಟ್ರೀಯ ಸ್ವಸಹಾಯ ತರಬೇತಿ ಸಂಸ್ಥೆ ಯಲ್ಲಿ ಆಯೋಜಿಸಲಾದ ಎರಡು ದಿನಗಳ ನಿರ್ವಹಣೆ ಮತ್ತು ವಿಕಸನ ತರಬೇತಿ ಕಾರ್ಯಾಗಾರವನ್ನು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶಿವಾನಂದ ಕಾಪಸಿ ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸ್ವಚ್ಚ ಆಹಾರ ಮತ್ತು ಸ್ವಸ್ಥ ಪರಿಸರ ನಿರ್ಮಾಣ ಮಾಡುವಲ್ಲಿ ನಿಲಯ ಮೇಲ್ವಿಚಾರಕರ ಜೊತೆಗೆ ಅಡುಗೆಯವರು ಮತ್ತು ಅಡುಗೆ ಸಹಾಯಕರ ಪಾತ್ರ ಕೂಡ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಇಲಾಖೆ ವತಿಯಿಂದ ನಡೆಯುವ ನಿರ್ವಹಣೆ ಮತ್ತು ವಿಕಸನ ತರಬೇತಿ ಕಾರ್ಯಗಾರ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕೆ., ಇಲಾಖೆಯ ವಿಸ್ತರಣಾಧಿ ಕಾರಿ ಬಿ.ಎಸ್.ಮಾದರ, ನಿಸ್ಟ್ ಉಪನ್ಯಾಸಕಿ ಸುಷ್ಮಾ, ತರಬೇತುದಾರ ಮಂಜಪ್ಪ ಗೋಣಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಹಾಕಪ್ಪ ಲಮಾಣಿ ವಹಿಸಿದ್ದರು. ವಿಸ್ತರಣಾಧಿಕಾರಿ ಗಿರಿಧರ ಗಾಣಿಗ ಸ್ವಾಗತಿಸಿದರು. ಕಾರ್ಕಳ ವಿಸ್ತರಣಾಧಿಕಾರಿ ದಯಾನಂದ್ ಪಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಉಡುಪಿ, ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳ 84 ಶಿಬಿರಾರ್ಥಿಗಳು ತರಬೇತಿ ಪ್ರಯೋಜನ ಪಡೆದರು.

ಶಿಸ್ತು ಮತ್ತು ಸಮಯ ಪಾಲನೆ, ಆರೋಗ್ಯಕರ ಮತ್ತು ಗುಣಮಟ್ಟದ ಆಹಾರ ತಯಾರಿಕೆ, ಜೀವನ ಕೌಶಲ್ಯ, ಸ್ವಚ್ಛ ಪರಿಸರ ಮತ್ತು ಕೈ ತೋಟ ಬೆಳೆಸುವಿಕೆ, ಕೆ. ಸಿ.ಎಸ್.ಆರ್. ನಿಯಮ, ವ್ಯಕ್ತಿತ್ವ ವಿಕಸನ, ಶುದ್ಧತೆ-ವೈಯಕ್ತಿಕ ಹಾಗೂ ವೃತ್ತಿ ಸಂಬಂಧಿಸಿದ ಸಮಸ್ಯೆಯ ಪರಿಹಾರ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ವಿಷಯಗಳ ಕುರಿತು ಉಪನ್ಯಾಸಕ ಮಂಜಪ್ಪಗೋಣಿ, ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ.ವಾಸುದೇವ, ಉಪನ್ಯಾಸಕ ಗಣೇಶ್ ಪ್ರಸಾದ್ ನಾಯಕ್, ನಿವೃತ್ತ ತೋಟಗಾರಿಕಾ ಅಧಿಕಾರಿ ಪ್ರಕಾಶ್ ಭಾಗವತ್, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ, ಬ್ರಹ್ಮಾವರ ರುಡಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ತರಬೇತಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News