ಐಎಂಎ ಉಡುಪಿ ಅಧ್ಯಕ್ಷರಾಗಿ ಡಾ.ಗುರುಮೂರ್ತಿ
Update: 2018-10-22 19:38 IST
ಉಡುಪಿ, ಅ.22: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ ಶಾಖೆಯ 2018-19ರ ಸಾಲಿನ ಅಧ್ಯಕ್ಷರಾಗಿ ಡಾ.ಗುರುಮೂರ್ತಿ ಭಟ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಡಾ.ಉಮೇಶ್ ಪ್ರಭು, ಕಾರ್ಯದರ್ಶಿಯಾಗಿ ಡಾ. ಕೃಷ್ಣಾ ನಂದ ಮಲ್ಯ, ಕೋಶಾಧಿಕಾರಿಯಾಗಿ ಡಾ.ರಾಜಲಕ್ಷ್ಮೀ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಡಾ.ವತ್ಸಲಾ ರಾವ್, ಡಾ.ರಾಜಗೋಪಾಲ ಭಂಡಾರಿ, ಡಾ.ಪ್ರಜ್ಞಾ ಮಲ್ಯ, ಡಾ.ರಂಜಿತಾ ನಾಯಕ್, ಡಾ.ರಾಮಚಂದ್ರ ಐತಾಳ್, ಡಾ.ಮುರಳೀಧರ ಪೈ, ಡಾ.ದಿನೇಶ್ ನಾಯಕ್, ಡಾ.ಸುನೀಲ್ ಮುಂಡ್ಕೂರ್, ಡಾ.ಉಮೇಶ್ ಎಸ್.ಎನ್., ಡಾ.ಪ್ರವೀಣ್ ಕುಮಾರ್, ಡಾ.ಚಿನ್ನಪ್ಪಎ.ಜಿ., ಡಾ.ವಿರೂಪಾಕ್ಷ ದೇವರಮನೆ, ರಾಜ್ಯ ಮಂಡಳಿ ಸದಸ್ಯರಾಗಿ ಡಾ.ಗೀತಾ ಪುತ್ರನ್, ಡಾ.ಅಶೋಕ್ ಕುಮಾರ್ ವೈ.ಜಿ., ಡಾ.ಅಶೋಕ್ ಕುಮಾರ್ ಕಾಮತ್, ಡಾ.ವಾಸುದೇವ, ಡಾ.ಮುರಳೀಧರ ಪಾಟೀಲ್, ಕೇಂದ್ರ ಮಂಡಳಿ ಸದಸ್ಯರಾಗಿ ಡಾ.ಆರ್.ಎನ್.ಭಟ್, ಡಾ.ವಿಜಯಕುಮಾರ್ ಶೆಟ್ಟಿ ಹಾಗೂ ಡಾ.ಸತೀಶ್ ಕಾಮತ್ ಆಯ್ಕೆಯಾಗಿದ್ದಾರೆ.