ಬಿಹಾರದಲ್ಲಿ ಜೆಡಿಯು ಬೇಡಿಕೆಗೆ ಮಣಿದ ಬಿಜೆಪಿ?

Update: 2018-10-22 14:33 GMT

ಪಾಟ್ನಾ, ಅ.22: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಮತ್ತು ನಿತೀಶ್ ಕುಮಾರ್ ರ ಪಕ್ಷವು ಮೈತ್ರಿ ಮಾಡಿಕೊಳ್ಳುವುದು ಖಚಿತಗೊಂಡಿದ್ದು, ಜೆಡಿಯುಗೆ ‘ಗೌರವಾನ್ವಿತ’ ಸೀಟುಗಳನ್ನು ನೀಡಲು ಬಿಜೆಪಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ಜೆಡಿಯುಗೆ ಬಿಜೆಪಿಗಿಂತ ಒಂದು ಸೀಟು ಕಡಿಮೆ ಅಂದರೆ 16 ಸೀಟುಗಳು ಲಭಿಸಲಿದೆ. ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಬಿಜೆಪಿ ನಾಯಕ ಅಮಿತ್ ಶಾ, ಬಿಹಾರ ಸಿಎಂ ನಿತೀಶ್ ಕುಮಾರ್ ನಡುವೆ ಮಾತುಕತೆ ನಡೆದಿತ್ತು. ರಾಜ್ಯದಲ್ಲಿ ಇತರ ಮಿತ್ರಪಕ್ಷಗಳಾದ ರಾಮ್ ವಿಲಾಸ್ ರ ಪಕ್ಷ ಐದು ಹಾಗು ಉಪೇಂದ್ರ ಕುಶ್ವಾಹರ ಪಕ್ಷ 2 ಸೀಟುಗಳನ್ನು ಗಳಿಸಿಕೊಂಡಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News