×
Ad

ಕುಂದಾಪುರ: ಅಕ್ರಮ ಮದ್ಯ ವಶ, ಇಬ್ಬರ ಬಂಧನ

Update: 2018-10-22 20:07 IST

ಉಡುಪಿ, ಅ.22:ಕಳೆದ ಶನಿವಾರ ರಾತ್ರಿ ಕುಂದಾಪುರ ತಾಲೂಕು ತ್ರಾಸಿ ಗ್ರಾಮದಲ್ಲಿರುವ ಸಾಯಿಲೀಲಾ ಬೀಡಾಸ್ಟಾಲ್ ಮೇಲೆ ದಾಳಿ ನಡೆಸಿದ ಕುಂದಾಪುರ ಉಪವಿಭಾಗದ ಅಬಕಾರಿ ನಿರೀಕ್ಷಕ ಕೆ.ದೊಡ್ಡಯ್ಯ ನೇತೃತ್ವದ ತಂಡ, 10.260 ಲೀ. ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಲ್ಲದೇ ಈ ಸಂಬಂಧ ಇಬ್ಬರನ್ನು ಬಂಧಿಸಿದೆ.

ಬಂಧಿತರನ್ನು ತ್ರಾಸಿ ಗ್ರಾಮದ ಕಾವೇರಿ ನಿಲಯದ ರಾಘವೇಂದ್ರ (36) ಹಾಗೂ ಬಾವಿಕಟ್ಟೆ ಪೋರ್ಟ್ ಬಂಗ್ಲೆ ರೋಡ್‌ನ ಕೃಷ್ಣ (43) ಎಂದು ಗುರುತಿಸಲಾಗಿದೆ.

ಜಿಲ್ಲಾಧಿಕಾರಿಗಳ ಆದೇಶದಂತೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾರದೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಸರ್ಜನಾ ಮೆರವಣಿಗೆ ನಡೆಯಲಿರುವುದರಿಂದ ಈ ಪ್ರದೇಶದಲ್ಲಿ ಓಣದಿನ (ಡ್ರೈ ಡೇ) ಎಂದು ಘೋಷಿಸಲಾಗಿತ್ತು. ಆದರೆ ಬೀಡಾ ಅಂಗಡಿಗೆ ಬರುವ ಗ್ರಾಹಕರಿಗೆ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ಈ ದಾಸ್ತಾನು ಹೊಂದಿದ್ದು, ಇದು ಕರ್ನಾಟಕ ಅಬಕಾರಿ ಕಾಯ್ದೆಯ ಉಲ್ಲಂಘನೆಯಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕುಂದಾಪುರ ಉಪ ವಿಬಾಗದ ಅಬಕಾರಿ ನಿರೀಕ್ಷಕ ಕೆ.ದೊಡ್ಡಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಅಬಕಾರಿ ಜಂಟಿ ಆಯುಕ್ತೆ(ಜಾರಿ ಮತ್ತು ತನಿಖೆ) ಶೈಲಜಾ ಎ ಕೋಟೆ ಅವರ ಆದೇಶದಂತೆ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಕೆ.ಬಿ.ಮೇರುನಂದನ್ ನಿರ್ದೇಶನದಂತೆ, ಕುಂದಾಪುರ ಉಪವಿಬಾಗದ ಅಬಕಾರಿ ಉಪಅಧೀಕ್ಷಕ ಚೇತನ್ ಕುಮಾರ್ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News