×
Ad

ಪುತ್ತೂರು: 6 ಬಡ ಜೋಡಿಗಳ ಸರಳ ವಿವಾಹ ಕಾರ್ಯಕ್ರಮ

Update: 2018-10-22 20:16 IST

ಪುತ್ತೂರು,ಅ.2: ಸಾಮಾಜಿಕ ಸೇವಾ ಕಾರ್ಯಕ್ರಮದ ಉದ್ದೇಶದಿಂದ ಸ್ಥಾಪಿಸಲಾದ ಪುತ್ತೂರಿನ ಇಹ್ಸಾನ್ ಫೌಂಡೇಶನ್ ವತಿಯಿಂದ 'ಸಾಂತ್ವನ ಜಾಗೃತಿ' ಸರಳ ವಿವಾಹ ಯೋಜನೆಯ ಮೂಲಕ 6 ಬಡ ಜೋಡಿಗಳಿಗೆ ವಿವಾಹ ಕಾರ್ಯ ರವಿವಾರ ಪುತ್ತೂರಿನ ಸಾಲ್ಮರ ಸೈಯದ್‍ಮಲೆ ಜುಮ್ಮಾ ಮಸೀದಿಯಲ್ಲಿ ನಡೆಸಲಾಯಿತು. 

ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಸೈಯದ್ ಅಹ್ಮದ್ ಪೂಕೋಯ ತಂಙಳ್ ನಿಖಾ ನೆರವೇರಿಸಿದರು. ಎಸ್. ಮುಹಮ್ಮದ್ ತಂಙಳ್ ಸಾಲ್ಮರ ದುವಾ ನೆರವೇರಿಸಿದರು. ಸೈಯದ್ ಮಲೆ ಮಸೀದಿಯ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕಲ್ಲೇಗ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಸೈಯದ್‍ಮಲೆ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು. 

ಗೂಡಿನಬಳಿ ಮಸೀದಿಯ ಖತೀಬ್ ರಿಯಾಝ್ ರಹ್ಮಾನಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಹ್ಸಾನ್ ಫೌಂಡೇಶನ್ ಕೋಶಾಧಿಕಾರಿ ಹಾಜಿ ಕೆ.ಪಿ. ಝಾಕಿರ್ ಹನೀಫ್ ಸ್ವಾಗತಿಸಿದರು. ಅಧ್ಯಕ್ಷ ಅಬ್ದುಲ್ಲಾ ಹಾಜಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News