ಬಿಲ್ಲವರ ಸಮಾಜದ ಕೊಡಿಮರದ ವಿಜ್ಞಾಪನಾಪತ್ರ ಬಿಡುಗಡೆ
ಬಂಟ್ವಾಳ, ಅ. 22: ಪೊಳಲಿರಾಜರಾಜೇಶ್ವರೀ ದೇವಸ್ಥಾನದ ನೂತನ ಧ್ವಜಸ್ತಂಭದ ನಿರ್ಮಾಣ ಸಮಿತಿ ಬಿಲ್ಲವರ ಸಮಾಜದ ವತಿಯಿಂದ ಸೇವಾರೂಪವಾಗಿ ನೀಡುವ ನೂತನ (ಧ್ವಜಸ್ತಂಭ) ಕೊಡಿಮರದ ವಿಜ್ಞಾಪನಾಪತ್ರವನ್ನು ಪೊಳಲಿ ದೇವಳದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ನಂತರ ಸರ್ವಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆದ ಬಿಲ್ಲವರ ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯ ಸಭೆಯಲ್ಲಿ ಪುರುಷ ಎನ್ ಸಾಲಿಯಾನ್ ಧ್ವಜಸ್ತಂಭದ ಬಗ್ಗೆ ಮಾಹಿತಿ ನೀಡಿದರು.
ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವ ಅಧ್ಯಕ್ಷ ರಾಮದಾಸ್ ಕೋಟ್ಯಾನ್ ಮಜಿಲಗುತ್ತು, ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಪ್ರ.ಕಾರ್ಯದರ್ಶಿ ಪುರುಷ ಎನ್. ಸಾಲಿಯಾನ್, ಚಂದಪ್ಪ ಸಾಲಿಯಾನ್, ಬಳ್ಳಿ ಚಂದ್ರಶೇಖರ, ಗೋಪಲಕೃಷ್ಣ ಕೈಕಂಬ, ಉಮೇಶ್ ಪೂಜಾರಿ ಬಾರಿಂಜ, ಜಯಾನಂದ ಅಂಚನ್, ನಾರಾಯಣ ಎಂ. ಅಮ್ಮುಂಜೆ, ರಾಜು ಕೋಟ್ಯಾನ್, ಯಶವಂತ ಕೋಟ್ಯಾನ್, ಬೂವನೇಶ್ ಪಚಿನಡ್ಕ, ಚಂದಪ್ಪ ಅಂಚನ್ ಮಜಿಲಗುತ್ತು, ಉದ್ಯಮಿ ಗಂಗಾಧರ ಪೂಜಾರಿ ಕೊಪ್ಪಲ, ಗಣೇಶ್ ಪೂಜಾರಿ, ಯಶವಂತ ದೇರಾಜೆ, ಸದಾಶಿವ ಕರ್ಕೇರಾ ಕಾಜಿಲ, ರಾಮಪ್ಪ ಪೂಜಾರಿ,ಪ್ರಶಾಂತ್ ವಿಮಲಕೋಡಿ, ದೀಪಾಕ್, ಸತೀಶ್ಚಂದ್ರ ಇರುವೈಲ್ ಪಾಣಿಲ, ದೇವುದಾಸ್ ಅಂಚನ್ ಗುರುಪುರ, ಚರಣ್ ಬಡಕಬೈಲ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.