ಮಂಗಳೂರು: ಬಾಲಕ ನಾಪತ್ತೆ
Update: 2018-10-22 21:49 IST
ಮಂಗಳೂರು, ಅ.22: ನಗರದಲ್ಲಿರುವ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ರಮೇಶ್ (15) ಎಂಬ ಬಾಲಕ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಬೆಂಗಳೂರು ಆನೆಕಲ್ಲು ತಾಲೂಕು ಜನತಾಕಾಲನಿ ಹೊಸಹಳ್ಳಿ ನಿವಾಸಿ.
ಮಂಗಳೂರು ಚೈಲ್ಡ್‌ಲೈನ್‌ನಲ್ಲಿದ್ದ ಈತನನ್ನು ಅನಾರೋಗ್ಯ ನಿಮಿತ್ತ ಅ.19ರಂದು ಸಂಜೆ 5:10ಕ್ಕೆ ಆಸ್ಪತ್ರೆಗೆ ದಾಖಲಿಸಿದ್ದು, ಈತ ಅ.22ರಂದು ಬೆಳಗ್ಗೆ 10ಗಂಟೆಯಿಂದ ಕಾಣೆಯಾಗಿದ್ದಾನೆ.
ಚಹರೆ: ಕಪ್ಪು ಮೈಬಣ್ಣ, ಸಾಧಾರಣ ಶರೀರ, ಬಲದ ಕೈ ಸ್ವಾಧೀನತೆಯಿಲ್ಲ, 152 ಸೆಂ.ಮೀ. ಎತ್ತರ, ಕನ್ನಡ ಭಾಷೆ ಮಾತನಾಡುತ್ತಾನೆ. ನೀಲಿ ಪ್ಯಾಂಟ್, ಗಿಡ್ಡ ತೋಳಿನ ಹಸಿರು ನೀಲಿ ಬಣ್ಣ ಬನಿಯಾನ್ ಧರಿಸಿದ್ದಾನೆ.