ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ- ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ
ಮಂಗಳೂರು, ಅ.22: ಬಾಲಭವನ ಸೊಸೈಟಿ ಬೆಂಗಳೂರು ರಾಜ್ಯ ಮಟ್ಟದ ಮಕ್ಕಳ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಾಲೂಕು ಮಟ್ಟದಲ್ಲಿ ನಾಲ್ಕು ಕ್ಷೇತ್ರದಲ್ಲಿ ಏರ್ಪಡಿಸಿರುವ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಶಿಬಿರದಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಕಲಾ ಪ್ರತಿಭೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಆರಿಸಿ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡುವ ಉದ್ದೇಶವನ್ನು ಶಿಬಿರ ಹೊಂದಿದೆ.
ಅರ್ಜಿ ಸಲ್ಲಿಸಲು ಅ.29 ಕೊನೆಯ ದಿನವಾಗಿದೆ. ಸೃಜನಾತ್ಮಕ ಕಲೆ- ಚಿತ್ರಕಲೆ, ಕರಕುಶಲತೆ, ಜೇಡಿಮಣ್ಣಿನ ಕಲೆ (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು), ಸೃಜನಾತ್ಮಕ ಬರವಣಿಗೆ- ಕಥೆ, ಕವನ, ಪ್ರಬಂಧ ಬರೆಯುವುದು (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು), ಸೃಜನಾತ್ಮಕ ಪ್ರದರ್ಶನ ಕಲೆ- ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ, ಯೋಗ ನೃತ್ಯ, ಮ್ಯಾಜಿಕ್ ಇತ್ಯಾದಿ. (ಯಾವುದಾದರೊಂದು ಕಲೆಯನ್ನು ಮಾತ್ರ ಪ್ರದರ್ಶಿಸಲು ಅವಕಾವಿರುತ್ತದೆ)
ಸ್ಪರ್ಧೆಯು ಅ.31ರಂದು ಕದ್ರಿ ಬಾಲಭವನದಲ್ಲಿ ನಡೆಯಲಿದ್ದು, ಮಂಗಳೂರು (ನಗರ) ವ್ಯಾಪ್ತಿಗೆ ಸಂಬಂಧಪಟ್ಟವರ ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು (ನಗರ) ಸಿಲ್ವಾ ಕ್ರಾಸ್ ರೋಡ್, ಬಿಷಪ್ ವಿಕ್ಟರ್ ಅಡ್ಡ ರಸ್ತೆ, ವೆಲೆನ್ಸಿಯಾ, ಮಂಗಳೂರು. ದೂ.ಸಂ.: 0824- 2432809 ವಿಳಾಸದಲ್ಲಿ ಪಡೆಯಬಹುದು.