ವಿಶೇಷ ಘಟಕ ಯೋಜನೆಯಡಿ ವಿಮೆ ಕಾರ್ಯಕ್ರಮ
ಮಂಗಳೂರು, ಅ.22: 2018-19ನೇ ಸಾಲಿನ ಹಾಲು ಉತ್ಪಾದಕರ ಪ್ರೋತ್ಸಾಹಧನದಲ್ಲಿ ಉಳಿಕೆ ಅನುದಾನದಲ್ಲಿ ಹೈನುಗಾರಿಕೆ, ಕರು ಘಟಕ, ಕುರಿ/ಮೇಕೆ ಮತ್ತು ಜಾನುವಾರು ವಿಮೆ ಸಹಾಯಧನ ಮೂಲಕ 2ಎಚ್‌ಪಿ ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರ ಕಾರ್ಯಕ್ರಮ ಅನುಷ್ಠಾನಗೊಳಿಸಲು ದ.ಕ. ಜಿಲ್ಲೆಗೆ ಗುರಿ ನಿಗದಿಪಡಿಸಲಾಗಿದೆ.
ಈ ಯೋಜನೆಯನ್ನು ಬೇಡಿಕೆ ಆಧಾರಿತ ಯೋಜನೆಯಾಗಿ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಇಲಾಖೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುವುದು. ಪ.ಜಾ. ಮತ್ತು ಪ.ಪಂ ಫಲಾನುಭವಿಗಳಿಗೆ ಹೈನುಗಾರಕೆ, ಘಟಕ ವೆಚ್ಚ (1,20,000) ಮತ್ತು ಕರು ಘಟಕ ವೆಚ್ಚ (18,000) ಇವೆರಡು ಘಟಕ ವೆಚ್ಚದ ಶೇ.75, ಸಹಾಯಧನ ಹಾಗೂ ಕುರಿ/ಮೇಕೆ ಘಟಕ ವೆಚ್ಚ (67,440) ಘಟಕ ವೆಚ್ಚದ ಶೇ.89, ಸಹಾಯಧನವನ್ನು ನೇರವಾಗಿ ಸಾಲ ಮಂಜೂರು ಮಾಡುವ ಹಣಕಾಸು ಸಂಸ್ಥೆಗಳು/ಬ್ಯಾಂಕ್‌ಗಳಿಗೆ ಪಾವತಿಸಲಾಗುವುದು.
ಪ.ಜಾ ಮತ್ತು ಪ.ಪಂ ಪಲಾನುಭವಿಗಳಿಗೆ ಉಚಿತವಾಗಿ ಜಾನುವಾರು ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯನ್ನು ಭೂ ಹಿಡುವಳಿ ರಹಿತ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದ್ಯತೆ ನೀಡಲಾಗುವುದು.
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಇಚ್ಚಿಸುವ ಫಲಾನುಭವಿಗಳು ಯೋಜನೆಯ ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ನಮೂನೆಗಾಗಿ ಆಯಾ ತಾಲ್ಲೂಕಿನ ಪಶುಸಂಗೋಪನಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರುಗಳು/ಸ್ಥಳೀಯ ಪಶುವೈದ್ಯಾಧಿಕಾರಿಗಳನ್ನು ಭೇಟಿ ಮಾಡುವುದು. ಈ ಯೋಜನೆಯಲ್ಲಿ ಎಲ್ಲ ಫಲಾನುಭವಿಗಳಿಗೆ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.
ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಎಲ್ಲ ಪೂರಕ ದಾಖಲೆಗಳೊಂದಿಗೆ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಅಥವಾ ಸ್ಥಳೀಯ ಪಶುವೈದ್ಯಾಧಿಕಾರಿಗಳಿಗೆ ಅ.31ರೊಳಗೆ ಸಲ್ಲಿಸಬೇಕು. ಜಿಲ್ಲೆಯ ಎಲ್ಲ ಆಸಕ್ತ ರೈತರು, ನಿರುದ್ಯೋಗಿ ಯುವಕ- ಯುವತಿಯರು ಈ ಯೋಜನೆ ಲಾಭ ಪಡೆದುಕೊಳ್ಳಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.