ಹಿಟ್ಲರ್‌ನ ಅಣು ಬಾಂಬ್ ಯೋಜನೆಯನ್ನು ವಿಫಲಗೊಳಿಸಿದ್ದ ಯೋಧ ನಿಧನ
Update: 2018-10-22 23:10 IST
ಓಸ್ಲೊ, ಅ. 22: ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನ ಪರಮಾಣು ಮಹತ್ವಾಕಾಂಕ್ಷೆಯನ್ನು ಭಗ್ನಗೊಳಿಸಲು ಎರಡನೇ ಮಹಾಯುದ್ಧದ ಅವಧಿಯಲ್ಲಿ ನಡೆಸಲಾದ ಅಪಾಯಕಾರಿ ದಾಳಿಯ ನೇತೃತ್ವ ವಹಿಸಿದ್ದ ಜೋಕಿಮ್ ರೋನ್‌ಬರ್ಗ್ ನಿಧನರಾಗಿದ್ದಾರೆ ಎಂದು ನಾರ್ವೆ ಸರಕಾರದ ಅಧಿಕಾರಿಗಳು ರವಿವಾರ ಹೇಳಿದ್ದಾರೆ. ಅವರಿಗೆ 99 ವರ್ಷವಾಗಿತ್ತು.
1943ರಲ್ಲಿ ಜರ್ಮನ್ ಆಕ್ರಮಣದ ವೇಳೆ ತನ್ನ ದೇಶ ನಾರ್ವೆಯಲ್ಲಿ ಗುಪ್ತವಾಗಿ ಕಾರ್ಯಾಚರಿಸುತ್ತಿದ್ದ ಜೋಕಿಮ್, ಭಾರ ಜಲವನ್ನು ಉತ್ಪಾದಿಸುತ್ತಿದ್ದ ಸ್ಥಾವರವೊಂದನ್ನು ಸ್ಫೋಟಿಸಿದ್ದರು. ಪರಮಾಣು ಬಾಂಬ್‌ಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಭಾರಜಲವನ್ನು ಉತ್ಪಾದಿಸಲಾಗುತ್ತಿತ್ತು.