ಟ್ವೆಕಾಂಡೋ ಚಾಂಪಿಯನ್ ಶಿಪ್ : ಬಂಟ್ವಾಳದ ಮುಹಮ್ಮದ್ ರಾಫೀಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ
Update: 2018-10-23 19:28 IST
ಬಂಟ್ವಾಳ, ಅ. 23: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಅಕ್ಟೋಬರ್ 15 ರಿಂದ 18 ರವೆರೆಗೆ ನಡೆದ 34 ನೇ ರಾಜ್ಯ ಕೆಡಟ್ ಜ್ಯೂನಿಯರ್ ಹಾಗೂ ಸೀನಿಯರ್ ಫೈಟಿಂಗ್ ಟ್ವೆಕಾಂಡೋ ಚಾಂಪಿಯನ್ ಶಿಪ್ ಪಂದ್ಯದ 57 ಕೆ.ಜಿ. ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಕೆಳಗಿನ ಪೇಟೆ ನಿವಾಸಿ ಮುಹಮ್ಮದ್ ರಾಫೀ ಅವರು ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಎಂ.ಎಚ್. ಅಬ್ದುಲ್ ರಝಾಕ್ ಹಾಗೂ ಝೊಹರಾ ದಂಪತಿಯ ಪುತ್ರ. ಮಹಮ್ಮದ್ ರಾಫಿಯವರು ಬಂಟ್ವಾಳ ತೌಹೀದ್ ಆಂಗ್ಲಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಇಸಾಖ್ ನಂದಾವರ ಅವರಿಂದ ತರಬೇತಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಯು ಫೆಬ್ರವರಿಯಲ್ಲಿ ಅಸ್ಸಾಂ ನಲ್ಲಿ ನಡೆಯಲಿದೆ.