×
Ad

ಅ.28: ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆಯ ಯುನಿಟ್ ಸಮ್ಮೇಳನ, ಮಹ್ಳರತುಳ್ ಬದ್ರಿಯ್ಯಾ ಕಾರ್ಯಕ್ರಮ

Update: 2018-10-23 20:18 IST

ಬಂಟ್ವಾಳ,ಅ.23: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್)  'ಯೌವ್ವನ ಮರೆಯಾಗುವ ಮುನ್ನ' ಎಂಬ ಘೋಷ ವಾಕ್ಯದೊಂದಿಗೆ  ರಾಜ್ಯಾದ್ಯಂತ ಎಲ್ಲಾ ಶಾಖೆಗಳಲ್ಲಿ ನಡೆಸುತ್ತಿರುವ 'ಯುನಿಟ್ ಸಮ್ಮೇಳನ'ದ ಮಿತ್ತರಾಜೆ ಶಾಖೆಯ ಯುನಿಟ್ ಸಮ್ಮೇಳನ ಮತ್ತು ಮಹ್ಳರತುಳ್ ಬದ್ರಿಯ್ಯಾ ಅಕ್ಟೋಬರ್ 28 ರಂದು ರಿಫಾಯಿಯ್ಯಾ ಜುಮಾ ಮಸೀದಿ ಪಂಜರಕೋಡಿಯಲ್ಲಿ ನಡೆಯಲಿದೆ.

ರಾತ್ರಿ 7 ಗಂಟೆಗೆ ಮಹ್ಳರತುಳ್ ಬದ್ರಿಯ್ಯಾ ನಡೆಯಲಿದ್ದು, ಸಯ್ಯದ್ ಮದಕ ತಂಙಳ್ ನೇತೃತ್ವ ವಹಿಸಲಿದ್ದಾರೆ. ನಂತರ ನಡೆಯುವ ಯುನಿಟ್ ಕಾನ್ಫರೆನ್ಸ್ ಕಾರ್ಯಕ್ರಮವು ಎಸ್ಸೆಸ್ಸೆಫ್ ಮಿತ್ತರಾಜೆ ಶಾಖಾಧ್ಯಕ್ಷರಾದ ಹಮೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪಂಜರಕೋಡಿ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಮದನಿ ಪಂಜರಕೋಡಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News