×
Ad

ವಿಟ್ಲ : ಮನೆಯಿಂದ ಲಕ್ಷಾಂತರ ರೂ. ನಗ-ನಗದು ಕಳವು

Update: 2018-10-23 20:41 IST

ಬಂಟ್ವಾಳ, ಅ. 23: ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವುಗೈದ ಘಟನೆ ವಿಟ್ಲದ ಬೊಬ್ಬೆಕೇರಿ ದೇವಸ್ಯಬೈಲು ಎಂಬಲ್ಲಿ ಮಂಗಳವಾರ ನಡೆದಿದೆ.

ವಿಟ್ಲದ ಪತ್ರಕರ್ತ, ಬೊಬ್ಬೆಕೇರಿ ನಿವಾಸಿ ವಿಷ್ಣುಗುಪ್ತ ಪುಣಚ ಯಾನೆ ರಮೇಶ್ ಕೆ‌ ಅವರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದೆ.

ವಿಷ್ಣು ಗುಪ್ತ ಅವರು ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ತೆರಳಿದ್ದರು. ಅವರ ಪತ್ನಿ ಕೂಡ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ.

ಸಂಜೆ 4 ಗಂಟೆಗೆ ಮನೆಗೆ ಬಂದಾಗ ಕಳವು ಘಟನೆ ಬೆಳಕಿಗೆ ಬಂದಿದೆ.

ಮನೆಯ ಹಿಂಬಾಗಿಲು ಮುರಿದು, ಒಳನುಗ್ಗಿದ ಕಳ್ಳರು ಎರಡು ಕಪಾಟಗಳನ್ನು ಜಾಲಾಡಿ, ಕಪಾಟಿನಲ್ಲಿದ್ದ 65 ಸಾವಿರ ರೂ. ನಗದು ಹಾಗೂ 18 ಪವನ್ ಚಿನ್ನಾಭರಣವನ್ನು ಕಳವು ಮಾಡಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ‌.

ಸ್ಥಳಕ್ಕೆ ಎಎಸ್ಪಿ ಸೋನಾವಣೆ ಋಷಿಕೇಶ್ ಭಗವಾನ್, ಬಂಟ್ವಾಳ ವೃತ್ತ ನಿರೀಕ್ಷಿಕ ಟಿ.ಡಿ. ನಾಗರಾಜ್, ವಿಟ್ಲ ಪ್ರಭಾರ ಎಸ್ಸೈ ಹರೀಶ್ ಹಾಗೂ ಸಿಬ್ಬಂದಿ ಬೇಟಿ ನೀಡಿದ್ದಾರೆ. ಮಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News