ಬೈಕ್ ಕಳವು: ದೂರು
Update: 2018-10-23 22:10 IST
ಮಂಗಳೂರು, ಅ.23: ನಗರದ ಭಾರತ್ ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಬೈಕ್ ಕಳವಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೂಲ್ಕಿ ನಿವಾಸಿ ಚಿದಾನಂದ (23) ಎಂಬವರ ಬೈಕ್ ಕಳವಾಗಿದ್ದು, ಕಳವಾದ ಬೈಕ್‌ನ ಮೌಲ್ಯ 45 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಚಿದಾನಂದ ಸೋಮವಾರ ರಾತ್ರಿ 7:15ಕ್ಕೆ ತಮ್ಮ ಬೈಕ್‌ನ್ನು ಭಾರತ್ ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ, ಸಿನೆಮಾಕ್ಕೆ ವೀಕ್ಷಣೆಗೆ ತೆರಳಿದ್ದಾರೆ. ಬಳಿಕ ರಾತ್ರಿ 10:30ಕ್ಕೆ ವಾಪಸಾದಾಗ ಬೈಕ್ ಕಳವಾಗಿದೆ. ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.