ಮಂಗಳೂರು : ಅಪರಿಚಿತ ಮೃತದೇಹ ಪತ್ತೆ
Update: 2018-10-23 22:12 IST
ಮಂಗಳೂರು, ಅ.23: ಅಪರಿಚಿತ ವ್ಯಕ್ತಿಯ ಮೃತದೇಹವೊಂದು ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.
ಮನಪಾ ಹಿರಿಯ ಆರೋಗ್ಯ ಅಧಿಕಾರಿ ಭರತ್‌ಕುಮಾರ್ ಸರ್ವಿಸ್ ಬಸ್ ನಿಲ್ದಾಣದ ವಠಾರದಲ್ಲಿ ನಗರ ನೈರ್ಮಲ್ಯ ಬಗ್ಗೆ ಕರ್ತವ್ಯದಲ್ಲಿದ್ದ ವೇಳೆ ಅಪರಿಚಿತ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಮೃತ ವ್ಯಕ್ತಿ ಭಿಕ್ಷುಕನಂತೆ ಕಾಣುತ್ತಿದ್ದು, ಹೊಟ್ಟೆಗೆ ಅನ್ನ ಆಹಾರವಿಲ್ಲದೆ ಅಥವಾ ಕಾಯಿಲೆ ಉಲ್ಬಣಗೊಂಡು ಮೃತಪಟ್ಟಿರುವ ಸಾಧ್ಯತೆಯಿದೆ.
ಚಹರೆ: ಮೃತನು 50-55 ವರ್ಷದವರಾಗಿದ್ದು, 5.8 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದಾನೆ. ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ನಗರದ ಪಾಂಡೇಶ್ವರ ಪೊಲೀಸ್ ಠಾಣೆ (0824- 2220518/ 2220500)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.