×
Ad

ಉಡುಪಿ ಡಿವೈಇಎಸ್ ತಂಡಕ್ಕೆ ದ್ವಿತೀಯ ಪ್ರಶಸ್ತಿ

Update: 2018-10-23 22:33 IST

ಉಡುಪಿ, ಅ.23: ಮೈಸೂರಿನ ಎನ್‌ಐಇ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮುಖ್ಯಮಂತ್ರಿ ಕಪ್ ದಸರಾ ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಉಡುಪಿ ಜಿಲ್ಲಾ ಕ್ರೀಡಾಂಗಣದ ಡಿವೈಇಎಸ್ ತಂಡ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ತಂಡದ ಸದಸ್ಯರು: ಸುಮನಾ ಎಂ., ವಿಶ್ಮಾ, ಶವೀನಾ, ಪ್ರತೀಕ್ಷಾ ಜಿ.ಎಂ, ರಜನಿ ನಾಯ್ಕ, ಪ್ರತೀಕ್ಷಾ ಶೆಟ್ಟಿ, ಐಶ್ವರ್ಯ, ಶರಣಿತಾ, ಶ್ರಾವ್ಯ.
ರಾಜ್ಯ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಎನ್‌ಐಎಸ್ ತರಬೇತುದಾರರಾದ ರಘುನಾಥ್ ಬಿ.ಎಸ್ ಇವರು ತಂಡಕ್ಕೆ ತರಬೇತಿಯನ್ನು ನೀಡಿದ್ದರು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News