ಬೈಂದೂರು ಚುನಾವಣೆ: ಎಂಸಿಎಂಸಿ ರಚನೆ
Update: 2018-10-23 23:14 IST
ಉಡುಪಿ, ಅ.23: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಪ್ರಯುಕ್ತ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಬೈಂದೂರು ವಿಧಾನಸಬಾ ಕ್ಷೇತ್ರದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ) ರಚಿಸಲಾಗಿದೆ.
ಬೈಂದೂರು ತಹಶೀಲ್ದಾರ್ ಕಚೇರಿಯಲ್ಲಿ ಸಮಿತಿ ಕಾರ್ಯಾಚರಿಸಲಿದೆ. ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಕೇಬಲ್ ಟಿವಿ ಜಾಹಿರಾತುಗಳನ್ನು ಎಂಸಿಎಂಸಿ ಸಮಿತಿಯಿಂದ ಪ್ರಮಾಣೀಕರಿಸಬೇಕಿದೆ. ಸಾರ್ವಜನಿಕರು ಎಂಸಿಎಂಸಿ ಸಮಿತಿಯ ದೂರವಾಣಿ ಸಂಖ್ಯೆ: 08254-251657ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.