ವಿಶೇಷ ಚೇತನರಿಗೆ ಚುನಾವಣಾ ಸಹಾಯವಾಣಿ
Update: 2018-10-23 23:15 IST
ಉಡುಪಿ, ಅ.23: ನ.3ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರದ ಬೈಂದೂರು ವಿಧಾನಸಬಾ ವ್ಯಾಪ್ತಿಯ ವಿಶೇಷ ಚೇತನರಿಗೆ ಮತಗಟ್ಟೆಯ ವ್ಯವಸ್ಥೆಗಳ ಬಗ್ಗೆ ಸಹಾಯವಾಣಿ ಸಂಖ್ಯೆ:0820-2574811ರಲ್ಲಿ ಬೇಕಾದ ಮಾಹಿತಿಗಳನ್ನು ನೀಡಲಾಗುವುದು.
ಗಾಲಿ ಕುರ್ಚಿ, ಭೂತಗನ್ನಡಿ, ಮತಗಟ್ಟೆಗೆ ಹೋಗಿ ಬರಲು ವಿಶೇಷ ಚೇತನ ಮತ್ತು ಅಶಕ್ತ ಹಿರಿಯ ನಾಗರಿಕ ಮತದಾರರಿಗೆ ವಾಹನದ ವ್ಯವಸ್ಥೆಗಳ ಅವಶ್ಯಕತೆ ಇರುವ, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಶೇಷ ಚೇತನ ಮತದಾರರು ಮಾಹಿತಿಗಾಗಿ ಮೇಲಿನ ಸಹಾಯವಾಣಿಯನ್ನು ಸಂಪರ್ಕಿಸು ವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.